philosopher ಹಿಲಾಸಹರ್‍
ನಾಮವಾಚಕ
  1. ತತ್ತ್ವಜ್ಞಾನಿ; ತಾತ್ತ್ವಿಕ; ದಾರ್ಶನಿಕ; ಬದುಕು, ನೀತಿ, ತರ್ಕ, ಮೊದಲಾದವುಗಳ ವಿಷಯದಲ್ಲಿ ಗಂಭೀರವಾದ ಸಿದ್ಧಾಂತಗಳನ್ನು ಹೊಂದಿರುವವನು ಯಾ ಪ್ರತಿಪಾದಿಸುವವನು.
  2. ತತ್ತ್ವಚಿಂತಕ; ತತ್ತ್ವಜಿಜ್ಞಾಸು.
  3. ತತ್ತ್ವಶಾಸ್ತ್ರಜ್ಞ; ತತ್ತ್ವಶಾಸ್ತ್ರವನ್ನು ಅಧ್ಯಯನ ಮಾಡಿರುವವನು ಯಾ ಅದರಲ್ಲಿ ಪಂಡಿತ.
  4. ತತ್ತ್ವನಿಷ್ಠ; ತತ್ತ್ವಾನುಷ್ಠಾಯಿ; ತತ್ತ್ವಶಾಸ್ತ್ರಕ್ಕನುಸಾರವಾಗಿ ಬಾಳನ್ನು ರೂಪಿಸಿಕೊಂಡವನು.
  5. ಶಾಂತಚಿತ್ತ; ಸ್ಥಿತಪ್ರಜ್ಞ; ಬಿಕ್ಕಟ್ಟಿನ ಸನ್ನಿವೇಶಗಳಲ್ಲಿ ಸಮಚಿತ್ತನಾಗಿರುವವನು.
ಪದಗುಚ್ಛ
  1. moral philosopher ನೀತಿತತ್ತ್ವಶಾಸ್ತ್ರಜ್ಞ.
  2. natural philosopher ಪ್ರಕೃತಿ ತತ್ತ್ವಶಾಸ್ತ್ರಜ್ಞ.