per- ಪರ್‍-
ಪೂರ್ವಪ್ರತ್ಯಯ
  1. ಅಂತಃ; ಒಳಗೆಲ್ಲಾ, ಎಲ್ಲೆಡೆ, ಸರ್ವತಃ ಎಂಬರ್ಥಗಳ ಪದಗಳ ವ್ಯುತ್ಪತ್ತಿಯಲ್ಲಿ ಪ್ರಯೋಗ, ಉದಾಹರಣೆಗೆ pervade.
  2. ಪೂರ್ತಿಯಾಗಿ, ಸಂಪೂರ್ಣವಾಗಿ, ಅತ್ಯಂತ, ಬಹಳ ಎಂಬರ್ಥಗಳ ಶಬ್ದಗಳ ವ್ಯುತ್ಪತ್ತಿಯಲ್ಲಿ, ಉದಾಹರಣೆಗೆ perturb.
  3. ನಾಶಕರವಾಗಿ, ಕೇಡಾಗಿ ಎಂಬರ್ಥದ ಶಬ್ದಗಳ ವ್ಯುತ್ಪತ್ತಿಯಲ್ಲಿ, ಉದಾಹರಣೆಗೆ perdition.
  4. (ರಸಾಯನವಿಜ್ಞಾನ)
    1. ನಿರ್ದಿಷ್ಟ ರಾಸಾಯನಿಕ ಧಾತು ಅತ್ಯಧಿಕ ಪ್ರಮಾಣದಲ್ಲಿರುವ: perchloride, peroxide.
    2. ಯಾವುದೇ ಧಾತು ಅತ್ಯಧಿಕ ವೇಲೆನ್ಸಿ ಯಾ ಆಕ್ಸಿಡೀಕೃತ ಸ್ಥಿತಿಯಲ್ಲಿರುವ: perchlorate, persulphate.