pendulum ಪೆಂಡ್ಯುಲಮ್‍
ನಾಮವಾಚಕ
  1. ಲೋಲಕ; ಕೆಳತುದಿಯಲ್ಲಿ ಭಾರ ಕಟ್ಟಿರುವ, ತೂಗಾಡುತ್ತಿರುವ ದಾರ, ಸರಪಣಿ, ಮೊದಲಾದವು.
  2. (ಮುಖ್ಯವಾಗಿ ಗಡಿಯಾರದ ಚಾಲಕಗಳನ್ನು ನಿಯಂತ್ರಿಸುವಂತೆ ತುದಿಯಲ್ಲಿ ಭಾರ ಕಟ್ಟಿರುವ) ಲೋಲಕದಂಡ.
  3. ತೂಗಾಡುತ್ತಿರುವ, ಒನೆದಾಡುತ್ತಿರುವ ವಸ್ತು.
  4. ಡೋಲಾಯಮಾನ (ಮನಃಸ್ಥಿತಿಯಲ್ಲಿರುವ) ವ್ಯಕ್ತಿ.
ಪದಗುಚ್ಛ

swing of the pendulum ಅತಿವಿರುದ್ಧಗಳ ನಡುವೆ, ಮುಖ್ಯವಾಗಿ ರಾಜಕೀಯ ಪಕ್ಷಗಳ ನಡುವೆ, ಸಾರ್ವಜನಿಕ ಅಭಿಪ್ರಾಯವು ತೂಗಾಡುತ್ತಿರುವ, ಡೋಲಾಯಮಾನವಾಗಿರುವ ಪ್ರವೃತ್ತಿ.