See also 2peculiar
1peculiar ಪಿಕ್ಯೂಲಿಅರ್‍
ಗುಣವಾಚಕ
  1. (ಒಬ್ಬನಿಗೆ, ಒಂದಕ್ಕೆ) ವಿಶಿಷ್ಟವಾದ; ಮಾತ್ರವೇ ಸೇರಿದ; ತನ್ನದೇ ಅವನದೇ ಯಾ ಅದರದೇ – ಆದ.
  2. ವ್ಯಕ್ತಿಗೆ ಸೇರಿದ; ವೈಯಕ್ತಿಕ; ವ್ಯಕ್ತಿವಿಶಿಷ್ಟವಾದ: one’s own peculiar character ತನ್ನದೇ ವಿಶಿಷ್ಟವಾದ ಸ್ವಭಾವ.
  3. ವಿಶಿಷ್ಟ(ಗುಣದ); ವಿಶಿಷ್ಟತೆಯ; ನಿರ್ದಿಷ್ಟವಾದ: a point of peculiar interest ವಿಶಿಷ್ಟವಾದ ಸ್ವಾರಸ್ಯ ಇರುವ ಅಂಶ.
  4. ವಿಚಿತ್ರ; ವಿಲಕ್ಷಣ; ಅನನ್ಯವಾದ: peculiar flavour
    1. ವಿಲಕ್ಷಣ ಪರಿಮಳ, ವಾಸನೆ.
    2. ವಿಲಕ್ಷಣ ರುಚಿ, ಸವಿ.
ಪದಗುಚ್ಛ
  1. peculiar people
    1. ಯೆಹೂದ್ಯರು.
    2. ದೇವರಿಂದ (ಉದ್ಧರಿಸಲು) ಆರಿಸಲ್ಪಟ್ಟ ಜನ. ಜನಾಂಗ.
  2. Peculiar People ಪಿಕ್ಯೂಲಿಯರ್‍ ಪೀಪಲ್‍; 1838ರಲ್ಲಿ ಇಂಗ್ಲೆಂಡಿನಲ್ಲಿ ಸ್ಥಾಪಿತವಾದ, ಕ್ರೈಸ್ತಧರ್ಮದ ಮೂಲಭೂತ ತತ್ತ್ವಗಳಲ್ಲಿ ನಂಬಿಕೆಯುಳ್ಳ, ರೋಗ ಪರಿಹಾರಕ್ಕೆ ಪ್ರಾರ್ಥನೆಯೇ ಸಾಧನವೆಂದು ನಂಬಿ ಔಷಧಾದಿಗಳನ್ನೊಲ್ಲದ, (ಪ್ರಾಟೆಸ್ಟೆಂಟ್‍ ಶಾಖೆಯ) ಒಂದು ಮತ ಪ್ರಚಾರಕ ಪಂಥ.
See also 1peculiar
2peculiar ಪಿಕ್ಯೂಲಿಅರ್‍
ನಾಮವಾಚಕ
  1. ವಿಶೇಷ; ವಿಶಿಷ್ಟ ಲಕ್ಷಣ, ಹಕ್ಕು, ಮೊದಲಾದವು.
  2. ಬಿಷಪ್ಪಿನ ಆಡಳಿತಕ್ಕೆ ಒಳಪಡದ ಪ್ಯಾರಿಷ್‍ ಚರ್ಚು.
  3. (Peculiar) ‘ಪಿಕ್ಯೂಲಿಯರ್‍ ಪೀಪಲ್‍’ ಪಂಥದವನು.