packing ಪ್ಯಾಕಿಂಗ್‍
ನಾಮವಾಚಕ

ಪ್ಯಾಕಿಂಗು:

  1. ಕಟ್ಟು; ವೇಷ್ಟನ; ಕಂತೆ ಕಟ್ಟುವುದು; ಮೂಟೆ ಕಟ್ಟುವಿಕೆ; ಮಾರುಕಟ್ಟೆ ಮೊದಲಾದ ಕಡೆಗಳಿಗೆ ಕಳುಹಿಸುವ ಪದಾರ್ಥಗಳನ್ನು ಕಟ್ಟುವುದು ಯಾ ಪೆಟ್ಟಿಗೆ ಮೊದಲಾದವುಗಳಲ್ಲಿ ತುಂಬುವುದು.
  2. ಒಡೆದುಹೋಗುವ, ಸೂಕ್ಷ್ಮವಾದ ವಸ್ತುಗಳನ್ನು ಸುತ್ತಲು, ಪ್ಯಾಕ್‍ ಮಾಡಲು ಮೆತ್ತೆಯಾಗಿ ಬಳಸುವ ವಸ್ತು.
  3. (ಯಂತ್ರಶಾಸ್ತ್ರ) ಅಡಚಲು; ಯಂತ್ರದ ಭಾಗಗಳು ಒಂದಕ್ಕೊಂದು ಸೇರಿಕೊಳ್ಳುವ ಭಾಗದಲ್ಲಿ ತುಂಬಲು ಯಾ ಅಚ್ಚುಗಂಬಿಯ ಘರ್ಷಣೆ ತಪ್ಪಿಸಲು ಬಳಸುವ ಕಾಗದ, ರಬ್ಬರ್‍, ಕಲ್ನಾರು, ಮೊದಲಾದವು.