ozone ಓಸೋನ್‍
ನಾಮವಾಚಕ
  1. (ರಸಾಯನವಿಜ್ಞಾನ) ಓಸೊನ್‍; ಅಣುವಿನಲ್ಲಿ ಮೂರು ಆಕ್ಸಿಜನ್‍ ಪರಮಾಣುಗಳುಳ್ಳ, ವಿಶಿಷ್ಟ ವಾಸನೆಯೂ ದಟ್ಟಣೆಯಲ್ಲಿ ನಸುನೀಲಿಬಣ್ಣವೂ ಉಳ್ಳ, ಅನಿಲರೂಪದಲ್ಲಿರುವ ಆಕ್ಸಿಜನ್ನಿನ ಭಿನ್ನರೂಪ.
  2. (ರೂಪಕವಾಗಿ) ಉಲ್ಲಾಸಕಾರಕ, ಉಲ್ಲಾಸಯುತ, ಉತ್ಸಾಹಪೂರಕ–ಪ್ರಭಾವ; ಹುರಿದುಂಬಿಸುವ, ಉಲ್ಲಾಸಗೊಳಿಸುವ ಪ್ರಭಾವ.
  3. (ಜನಸಾಮಾನ್ಯ ಪ್ರಯೋಗ) ಸಮುದ್ರತೀರ ಮೊದಲಾದ ಜಾಗಗಳಲ್ಲಿ ದೊರೆಯುವ ಉಲ್ಲಾಸಜನಕ ವಾಯು, ಗಾಳಿ.