oyster ಆಇಸ್ಟರ್‍
ನಾಮವಾಚಕ
  1. ಸಿಂಪಿ; ಮಳಿ; (ಸಾಮಾನ್ಯವಾಗಿ ಜೀವಸಹಿತ ತಿನ್ನುವ) ಇಚ್ಚಿಪ್ಪಿನ, ಇಕ್ಕವಾಟದ ಮೃದ್ವಂಗಿ ಪ್ರಾಣಿಜಾತಿ. Figure: oyster-1
  2. ಕೋಳಿ ಸಿಂಪಿ; ಕೋಳಿಯ ಬೆನ್ನಿನಲ್ಲಿರುವ ಸಿಂಪಿಯಾಕಾರಾದ ಮಾಂಸದ ಭಾಗ.
  3. ಕಾಮ್ಯಸಂಪುಟ; ಕಾಮ್ಯ ಕರಂಡ; ತಾನು ಬಯಸುವ ಎಲ್ಲವನ್ನೂ ಒಳಗೊಂಡಿರುವುದೆಂದು ಭಾವಿಸಲಾಗಿರುವ ವಸ್ತು: the world is my oyster ಪ್ರಪಂಚವೇ ನನ್ನ ಕಾಮ್ಯಸಂಪುಟ.
  4. (ಅಶಿಷ್ಟ) ಮಿತಭಾಷಿ; ತುಟಿಬಿಚ್ಚದವನು; ಗುಮ್ಮನಗುಸುಕ.
  5. ನಸು ಬೂದು ಛಾಯೆಯ ಬಿಳಿಪು; ಬೂದುಬಿಳಿ ಬಣ್ಣ.