oxidize ಆಕ್ಸಿಡೈಸ್‍
ಸಕರ್ಮಕ ಕ್ರಿಯಾಪದ

ಆಕ್ಸಿಡೀಕರಿಸು:

  1. (ರಸಾಯನವಿಜ್ಞಾನ) ಉತ್ಕರ್ಷಿಸು; (ಯಾವುದೇ ಧಾತು ಯಾ ಸಂಯುಕ್ತಕ್ಕೆ) ಆಕ್ಸಿಜನ್‍ ಸೇರಿಸು, (ಅದರಿಂದ) ಹೈಡ್ರೊಜನ್‍ ತೆಗೆದುಹಾಕು, (ಅದರಲ್ಲಿ) ವಿದ್ಯುದೃಣ ಭಾಗಗಳ ಪ್ರಮಾಣವನ್ನು ಹೆಚ್ಚಿಸು ಯಾ (ಒಂದು ಪರಮಾಣು ಯಾ ಅಯಾನಿನಿಂದ) ಇಲೆಕ್ಟ್ರಾನುಗಳನ್ನು ತೆಗೆ.
  2. ಕಿಲುಬು ಬರಿಸು ಯಾ ತುಕ್ಕು ಹಿಡಿಸು; ಲೋಹದ ಮೇಲ್ಮೈಯಲ್ಲಿ ಅದರ ಸಂಯುಕ್ತದ ಪದರವನ್ನು ಉತ್ಪತ್ತಿಮಾಡು.
ಅಕರ್ಮಕ ಕ್ರಿಯಾಪದ

ಉತ್ಕರ್ಷಿತವಾಗು; ಉತ್ಕರ್ಷಣ ಹೊಂದು.