See also 2own
1own ಓನ್‍
ಗುಣವಾಚಕ
  1. ಸ್ವಂತ (ಮತ್ತೊಬ್ಬರದಲ್ಲ): saw it with my own eyes ನನ್ನ (ಸ್ವಂತ) ಕಣ್ಣುಗಳಿಂದಲೇ ನೋಡಿದೆ.
  2. ತನ್ನ; ತನ್ನದೇ ಆದ; ತನಗೇ ವಿಶಿಷ್ಟವಾದ, ವಿಲಕ್ಷಣವಾದ: has a value all its own ಅದಕ್ಕೆ ತನ್ನದೇ ಆದ ಒಂದು ಬೆಲೆ ಇದೆ.
  3. ಸ್ವಕೀಯ; ತಾನೇ ಮಾಡಿಕೊಂಡ; ಸ್ವಯಂಕೃತ: let them stew in their own juice ಅವರು ಮಾಡಿಕೊಂಡದ್ದನ್ನು ಅವರೇ ಅನುಭವಿಸಲಿ.
  4. ಅದರದೇ ಆದ; ಅದರದೇ ಸ್ವರೂಪದ: loves truth for its own sake ಸತ್ಯಕ್ಕಾಗಿಯೇ ಸತ್ಯವನ್ನು ಪ್ರೀತಿಸುತ್ತಾನೆ.
  5. (ವ್ಯಕ್ತಿತ್ವವನ್ನು ಒತ್ತಿ ಹೇಳುವಾಗ) ತನ್ನ; ತನ್ನದೇ: cooks her own meals ತನ್ನ ಅಡಿಗೆಯನ್ನು ತಾನೇ ಮಾಡಿಕೊಳ್ಳುತ್ತಾಳೆ. I am my own master ನನಗೆ ನಾನೇ ಯಜಮಾನ.
  6. ಸ್ವಂತ ಆಸ್ತಿ: may I not do what I will with my own? ನನ್ನ ಸ್ವಂತ ಆಸ್ತಿಯ ಬಗ್ಗೆ ನನಗಿಚ್ಛೆ ಬಂದಂತೆ ನಡೆದುಕೊಳ್ಳಬಾರದೇಕೆ?
  7. ಸ್ವಂತ; ಖಾಸಾ: own brother ಸ್ವಂತ ಸೋದರ; ಒಂದೇ ತಾಯಿ ತಂದೆಗಳಿಗೆ ಹುಟ್ಟಿದ ಸೋದರ.
  8. ಸಂಬಂಧಿಗಳು: his own received him not ಅವನವರೇ, ಅವನ ಸಂಬಂಧಿಗಳೇ ಅವನನ್ನು ಬರಮಾಡಿಕೊಳ್ಳಲಿಲ್ಲ.
ಪದಗುಚ್ಛ
  1. be one’s own man ತಾನೇ ತಾನಾಗಿರು; (ಇನ್ನೊಬ್ಬರ ಆಳಾಗದೆ) ತನಗೆ ತಾನೇ ಸ್ವತಂತ್ರನಾಗಿರು; ತನ್ನ ಶಕ್ತಿಗಳೆಲ್ಲವನ್ನೂ ಪೂರ್ಣ ಸ್ವಾಧೀನದಲ್ಲಿಟ್ಟುಕೊಂಡಿರು.
  2. come into one’s own
    1. ತನಗೆ ನ್ಯಾಯವಾಗಿ ಸೇರಬೇಕಾದ ಆಸ್ತಿಯನ್ನು ವಶಕ್ಕೆ ತೆಗೆದುಕೊ; ತನ್ನ ಆಸ್ತಿಯನ್ನು ವಹಿಸಿಕೊ.
    2. ತನಗೆ ಸಲ್ಲ ಬೇಕಾದ ಗೌರವ ಮೊದಲಾದವನ್ನು ಪಡೆದುಕೊ.
  3. get one’s own back (ಆಡುಮಾತು) ಸೇಡು, ಮುಯ್ಯಿ–ತೀರಿಸಿಕೊ.
  4. God’s own heaven ಸಾಕ್ಷಾತ್‍ ಸ್ವರ್ಗ.
  5. hold one’s own (ಸ್ವಂತ ಅಭಿಪ್ರಾಯ, ನಿಲುವು, ಮೊದಲಾದವನ್ನು) ಬಿಟ್ಟು ಕೊಡದಿರು; ಪಟ್ಟು ಬಿಡದಿರು; ಸೋಲದಿರು.
  6. my own (ಮುಖ್ಯವಾಗಿ ಸಂಬೋಧನೆಯಲ್ಲಿ, ಪ್ರೇಮ ವ್ಯಕ್ತಪಡಿಸುವಾಗ) ನನ್ನ ಆತ್ಮೀಯ.
  7. my own sweetheart = ಪದಗುಚ್ಛ\((6)\).
  8. of one’s own ತನಗೇ ಸೇರಿದ; ತನ್ನ ಸ್ವಂತದ; ಸ್ವಕೀಯ; ಖಾಸಾ: will give you one of my own ನನ್ನ ಸ್ವಂತದ್ದೊಂದನ್ನು, ನನಗೇ ಸೇರಿದ ಒಂದನ್ನು ಕೊಡುತ್ತೇನೆ.
  9. on one’s own
    1. ಸ್ವತಂತ್ರವಾಗಿ; ಇನ್ನೊಬ್ಬರ ಸಹಾಯವಿಲ್ಲದೆ.
    2. ಸ್ವತಃ; ತನ್ನ ಜವಾಬ್ದಾರಿಯ ಮೇಲೆ.
    3. ತನ್ನ ಸಾಧನೆಯಿಂದಲೇ.
    4. ಒಬ್ಬನೇ; ಏಕಾಂಗಿಯಾಗಿ; ಒಬ್ಬೊಂಟಿಗನಾಗಿ.
    5. ಅಸಮಾನನಾಗಿ; ಅಸದೃಶನಾಗಿ; ಸಾಟಿಯಿಲ್ಲದೆ.
  10. own goal
    1. ಸ್ವಂತ ಗೋಲು; ತನ್ನ ಸ್ವಂತ ಪಕ್ಷದ ವಿರುದ್ಧವೇ ಹೊಡೆದುಕೊಂಡ ಗೋಲು.
    2. ಸ್ವಘಾತುಕ ಕಾರ್ಯ; ಸ್ವಹಿತಕ್ಕೇ ಧಕ್ಕೆಯುಂಟು ಮಾಡುವ, ಅನುದ್ದಿಷ್ಟ ಪರಿಣಾಮ ತರುವ–ಕಾರ್ಯ ಯಾ ಪ್ರಯತ್ನ.
See also 1own
2own ಓನ್‍
ಸಕರ್ಮಕ ಕ್ರಿಯಾಪದ
  1. (ಆಸ್ತಿಯಾಗಿ) ಪಡೆದಿರು; ಹೊಂದಿರು; (ಆಸ್ತಿಯ) ಸ್ವಾಮ್ಯವುಳ್ಳವನಾಗಿರು, ಒಡೆಯನಾಗಿರು.
  2. (ಭೂತಕೃದಂತದಲ್ಲಿ, ಸಮಾಸ ಪೂರ್ವಪದವಾಗಿ) ಸ್ವಾಮ್ಯವಾಗಿ ಒಂದಕ್ಕೆ ಸೇರಿರು: state-owned ಸರ್ಕಾರಿ; ಸರ್ಕಾರಕ್ಕೆ ಸೇರಿದ; ಸರ್ಕಾರದ ವಶದಲ್ಲಿರುವ.
  3. (ಕರ್ತೃತ್ವ, ಜನ್ಮದಾತೃತ್ವ ಯಾ ಸ್ವಾಮ್ಯ) ತನ್ನದೆಂದು–ಒಪ್ಪಿಕೊ, ಅಂಗೀಕರಿಸು, ಸ್ವೀಕರಿಸು: the hat that nobody will own ತನ್ನದೆಂದು ಯಾರೂ ಒಪ್ಪಿಕೊಳ್ಳದ ಹ್ಯಾಟು.
  4. (ಇದೆಯೆಂದು, ಸತ್ಯವೆಂದು, ಸಿಂಧುವೆಂದು) ಅಂಗೀಕರಿಸು; ಒಪ್ಪಿಕೊ: owns his deficiencies ತನ್ನ ಕುಂದುಕೊರತೆಗಳನ್ನು ಒಪ್ಪಿಕೊಳ್ಳುತ್ತಾನೆ.
  5. (ಒಬ್ಬನ ಅಧಿಕಾರ ಮೊದಲಾದವಕ್ಕೆ) ಎದುರಾಡದೆ ತಲೆಬಾಗು; ಪ್ರತಿಭಟಿಸದೆ ಒಪ್ಪಿಕೊ.
ಅಕರ್ಮಕ ಕ್ರಿಯಾಪದ

ಒಪ್ಪಿಕೊ: own to having told a lie ಸುಳ್ಳು ಹೇಳಿದ್ದಾಗಿ (ತಾನೇ) ಒಪ್ಪಿಕೊ.

ಪದಗುಚ್ಛ

own up (ಆಡುಮಾತು) ಮರೆಮಾಚದೆ ತಪ್ಪೊಪ್ಪಿಕೊ; ತನ್ನದೇ ತಪ್ಪೆಂದು ಪ್ರಕಟವಾಗಿ ಒಪ್ಪಿಕೊ: nobody owned up to the theft ಕದ್ದೆವೆಂದು ಯಾರೂ ಒಪ್ಪಿಕೊಳ್ಳಲಿಲ್ಲ. eventually she owned up ಕೊನೆಗೆ ಅವಳು ತಪ್ಪನ್ನು ಒಪ್ಪಿಕೊಂಡಳು.