owe
ಸಕರ್ಮಕ ಕ್ರಿಯಾಪದ
  1. (ಒಬ್ಬನಿಗೆ ಹಣ) ಸಾಲ ತೀರಿಸಬೇಕಾಗಿರು; ಋಣಿಯಾಗಿರು; ಹಿಂದಕ್ಕೆ ಕೊಡಬೇಕಾಗಿರು: he owes me five rupees ಅವನು ನನಗೆ ಐದು ರೂಪಾಯಿ (ಸಾಲ) ಕೊಡಬೇಕಾಗಿದೆ.
  2. (ಒಬ್ಬನಿಗೆ ಗೌರವ, ಕೃತಜ್ಞತೆ) ಸಲ್ಲಿಸಬೇಕಾಗಿರು: the respect he owes his elders ಅವನು ತನ್ನ ಹಿರಿಯರಿಗೆ ಸಲ್ಲಿಸಬೇಕಾಗಿರುವ ಗೌರವ.
  3. ( ಅಕರ್ಮಕ ಕ್ರಿಯಾಪದ ಸಹ) ಸಾಲ, ಕಡ–ಹೊತ್ತಿರು: he does not owe any man ಅವನು ಯಾರಿಗೂ ಸಾಲ ತೀರಿಸಬೇಕಾಗಿಲ್ಲ. I owed for all my clothes ನನ್ನ ಬಟ್ಟೆಬರೆಗಳೆಲ್ಲಾ ಸಾಲದ್ದೇ.
  4. (ಒಬ್ಬನಿಗೆ ಉಪಕಾರ ಮೊದಲಾದವುಗಳಿಗಾಗಿ) ಋಣಿಯಾಗಿರು: we owe to Newton the principle of gravitation ಗುರುತ್ವಾಕರ್ಷಣ ತತ್ವಕ್ಕಾಗಿ ನಾವು ನ್ಯೂಟನ್‍ಗೆ ಋಣಿಗಳು.
ಪದಗುಚ್ಛ
  1. owe a person a grudge ಒಬ್ಬನ ಬಗ್ಗೆ ದ್ವೇಷ ಹೊಂದಿರು.
  2. owe it to oneself to do ತನ್ನ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು, ತನಗೆ ಅನ್ಯಾಯ ಮಾಡಿಕೊಳ್ಳದಿರಲು–ಮಾಡಬೇಕಾಗಿರು.