overwrite ಓವರ್‍ರೈಟ್‍
ಕ್ರಿಯಾಪದ
(ಭೂತರೂಪ overwrote; ಭೂತಕೃದಂತ overwritten).
  1. ಬೊಜ್ಜು ಭಾಷೆಯಲ್ಲಿ ಬರೆ; ಶಬ್ದಾಡಂಬರದ, ಅತ್ಯಲಂಕಾರದ ಶೈಲಿಯಲ್ಲಿ ಬರೆ: he overwrote to the point of absurdity ಆತ ಅರ್ಥಶೂನ್ಯವಾಗುವಷ್ಟು ಮಟ್ಟಿಗೆ ಬೊಜ್ಜುಭಾಷೆಯಲ್ಲಿ ಬರೆದನು.
  2. (ಉದ್ದೇಶವೇ ಕೆಡುವಷ್ಟು) ಮೀರಿ ಬೆಳೆಸು; ಅತಿ ವಿಸ್ತರಿಸು: he overwrites his scenes and defeats his own design ತನ್ನ ದೃಶ್ಯಗಳನ್ನು ಅಗತ್ಯ ಮೀರಿ ಬೆಳೆಸಿ ಅವನು ತನ್ನ ಮೂಲಕಲ್ಪನೆಯನ್ನೇ ಕೆಡಿಸಿಕೊಳ್ಳುತ್ತಾನೆ.
  3. ಮೇಲೆ ಬರೆ: overwrite the flyleaf ಪುಸ್ತಕದ ಮೊದಲಿನ ಖಾಲಿ ಹಾಳೆಯ ಮೇಲೆ ಬರೆ.
  4. (ಕಂಪ್ಯೂಟರ್‍) (ಹೈಲ್‍ ಮೊದಲಾದವುಗಳಲ್ಲಿ) ಹೊಸ ದತ್ತಾಂಶವನ್ನು ದಾಖಲು ಮಾಡಿ ಹಳೆಯ ದತ್ತಾಂಶವನ್ನು ನಾಶ ಮಾಡು, ಅಳಿಸಿಹಾಕು.
ಅಕರ್ಮಕ ಕ್ರಿಯಾಪದ
  1. ಅತಿ ವಿಸ್ತಾರವಾಗಿ ಯಾ ಅತಿ ಆಲಂಕಾರಿಕವಾಗಿ ಬರೆ: many young authors tend to overwrite ಹಲವು ತರುಣ ಲೇಖಕರಲ್ಲಿ ಅತಿ ವಿಸ್ತಾರವಾಗಿ ಯಾ ಬಹಳ ಅಲಂಕಾರಯುತವಾಗಿ ಬರೆಯುವ ಪ್ರವೃತ್ತಿ ಇದೆ.
  2. ವಿಪರೀತ, ಬಹಳ–ಬರೆ; ಬರೆದು ಬರೆದು ಸುಸ್ತಾಗು; ಸುಸ್ತಾಗುವಷ್ಟು ಬರೆ.
  3. ಬರೆಹದ ಮೇಲೆ ಬರೆ; ಬರೆದಿರುವುದರ ಮೇಲೆಯೇ ಮತ್ತೆ ಬರೆ.
  4. (ಹಡಗು ವಿಮೆಯಲ್ಲಿ) ಪ್ರೀಮಿಯಂ ಆದಾಯದ ಮಿತಿ ಅವಕಾಶ ನೀಡುವುದಕ್ಕಿಂತ ಹೆಚ್ಚು ನಷ್ಟ ಸಂಭವವನ್ನು ಒಪ್ಪು.