See also 2overwork
1overwork ಓವರ್‍ವರ್ಕ್‍
ಸಕರ್ಮಕ ಕ್ರಿಯಾಪದ
  1. ಅತಿಯಾಗಿ ಕೆಲಸ ಮಾಡಿಸು; ಅತಿಯಾಗಿ ದುಡಿಸು; ಅತಿ ಭಾರವಾದ ಕೆಲಸ ಕೊಟ್ಟು ಯಾ ಅತಿ ಹೆಚ್ಚಿನ ಕಾಲ ಕಷ್ಟದ ಕೆಲಸ ಮಾಡಿಸಿ ಬಳಲಿಸಿಬಿಡು.
  2. ಅತಿ ಕೆರಳಿಸು; ಬಹಳ ಉದ್ರೇಕಗೊಳಿಸು: overwork a mob to frenzy ದೊಂಬಿಯ ಜನರನ್ನು ಹುಚ್ಚೇಳುವಷ್ಟು ಕೆರಳಿಸು.
  3. ಅತಿ ಭಾರವಾದ ಕೆಲಸದಿಂದ ತನ್ನನ್ನು ತಾನೇ ಬಳಲಿಸಿಕೊ: don’t overwork yourself on such a hard task ಅಂತಹ ಕಠಿನ ಕೆಲಸದಿಂದ ನಿನ್ನನ್ನು ನೀನೇ ಅತಿಯಾಗಿ ಬಳಲಿಸಿಕೊಳ್ಳಬೇಡ.
  4. (ಅಲಂಕಾರ ಮೊದಲಾದವನ್ನು) ಅತಿಯಾಗಿ ಪ್ರಯೋಗಿಸು ಯಾ ವಿಸ್ತರಿಸು: overwork the metaphor ಹಳಸಿ ಹೋಗುವಷ್ಟು ಅತಿಯಾಗಿ ರೂಪಕವನ್ನು ಬಳಸು.
  5. ಹೊರಮೈಯಲ್ಲಿ–ಮಾಡು, ಕೆತ್ತು, ರಚಿಸು: marble pillars overworked with inscriptions ಶಾಸನಗಳನ್ನು (ಹೊರ ಮೈಯಲ್ಲಿ) ಕೊರೆದ, ಕೆತ್ತಿದ ಅಮೃತಶಿಲಾಸ್ತಂಭಗಳು.
  6. (ರೂಪಕವಾಗಿ) ಅತಿಯಾಗಿ ಬಳಸು; ಮಿತಿಮೀರಿ ಬಳಸು, ಉಪಯೋಗಿಸು.
ಅಕರ್ಮಕ ಕ್ರಿಯಾಪದ

ಅತಿ ಕೆಲಸ ಮಾಡು; ವಿಪರೀತ ದುಡಿ.

See also 1overwork
2overwork ಓವರ್‍ವರ್ಕ್‍
ನಾಮವಾಚಕ
  1. ಶಕ್ತಿ ಸಾಮರ್ಥ್ಯಕ್ಕೆ ಮೀರಿದ ಕೆಲಸ; ಅತಿ ದುಡಿತ.
  2. (ನಿಗದಿಯಾದದ್ದಕ್ಕಿಂತ) ಹೆಚ್ಚಿಗೆಯ ಕೆಲಸ; ಅಧಿಕ ಶ್ರಮ.