overwhelm ಓವರ್‍ವೆಲ್ಮ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಭಾರಿ ಸೇನಾಬಲ ಮೊದಲಾದವುಗಳಿಂದ) ಎದುರಾಳಿಯನ್ನು ಸದೆಬಡಿ; ಧ್ವಂಸಮಾಡು: the barbarian hordes overwhelmed the Roman troops ಅನಾಗರಿಕರ ಭಾರಿ ತಂಡಗಳು ರೋಮನ್‍ ಪಡೆಗಳನ್ನು ಸದೆಬಡಿದವು.
  2. (ಭಾವೋದ್ವೇಗ ಮೊದಲಾದವುಗಳಿಂದ) ಪರವಶಗೊಳಿಸು; ಮನಸ್ಸಿನ ಸ್ವಾಸ್ಥ್ಯ ತಪ್ಪಿಸು; ಚಿತ್ತಸ್ಥೈರ್ಯ ಕುಂದಿಸು: overwhelmed by remorse ಪಶ್ಚಾತ್ತಾಪದಿಂದ ಮನ ಕುಗ್ಗಿದ.
  3. (ರಾಶಿರಾಶಿಯಾಗಿ ಕೊಡುವುದು, ಕೇಳುವುದು, ಮೊದಲಾದವುಗಳಿಂದ) ಮೂಕಗೊಳಿಸು; ಸೊಲ್ಲೆತ್ತದಂತೆ ಮಾಡು; ಬಾಯಿಮುಚ್ಚಿಸು; ಮಾತೇ ಹೊರಡದಂತೆ ಮಾಡು: overwhelm one with presents ರಾಶಿರಾಶಿ ಉಡುಗೊರೆ ಕೊಟ್ಟು ಒಬ್ಬನಿಗೆ ಮಾತೇ ಹೊರಡದಂತೆ ಮಾಡು. overwhelm someone with questions ಪ್ರಶ್ನೆಗಳ ಸುರಿಮಳೆಗರೆದು ಒಬ್ಬನನ್ನು ಸೊಲ್ಲೆತ್ತದಂತೆ ಮಾಡು.
  4. (ಭಗ್ನಾವಶೇಷಗಳು ಮೊದಲಾದವುಗಳ ರಾಶಿಯ ಅಡಿಯಲ್ಲಿ) ಹುದುಗಿಸಿಬಿಡು; ಹೂತು ಹೋಗುವಂತೆ ಮಾಡು: the lava from the Vesuvius overwhelmed Pompeii ವೆಸುವಿಯಸ್‍ ಜ್ವಾಲಾಮುಖಿ ಉಗುಳಿದ ಶಿಲಾರಸ ಪಾಂಪೇ ನಗರವನ್ನೆಲ್ಲ ಹೂತುಬಿಟ್ಟಿತು.
  5. (ಎದುರಾಳಿಯನ್ನು) ಸೋಲಿಸಿಬಿಡು; ಉರುಳಿಸಿಬಿಡು.
  6. ತುಳಿದುಹಾಕು; ಹುಟ್ಟಡಗಿಸು.
  7. ಹಠಾತ್‍ ವಿನಾಶಕ್ಕೆ ಒಯ್ಯು; ಹಠಾತ್‍ ನಾಶ ಮಾಡು.
  8. (ವಿಪರೀತ ವ್ಯವಹಾರ ಮೊದಲಾದವುಗಳಿಂದ) ಮುಳುಗಿಸು; ತನ್ನ ಮೇಲಿನ ಹತೋಟಿ ಕಳೆದುಕೊಳ್ಳುವಂತೆ ಮಾಡು.
  9. (ಪ್ರಾಚೀನ ಪ್ರಯೋಗ) ಸೋಲಿಸು.