1overweight ಓವರ್‍ವೇಟ್‍
ನಾಮವಾಚಕ
  1. ಹೆಚ್ಚು ತೂಕ; ಅಧಿಕತೂಕ; ಕಾನೂನಿನ ಯಾ ನಿಯಮದ, ಕಟ್ಟಳೆಯನ್ನು ಮೀರಿದ (ಸರಕು, ಸಾಮಾನಿನ ಮೂಟೆ, ಮೊದಲಾದವುಗಳ) ತೂಕ: the overweight of the luggage cost us 100 rupees ನಮ್ಮ ಸಾಮಾನಿನ ಹೊರೆಯ ಹೆಚ್ಚಿನ ತೂಕಕ್ಕಾಗಿ ನಮಗೆ ನೂರು ರೂಪಾಯಿಗಳು ತಗುಲಿದವು.
  2. ಅತಿತೂಕ; ಸಾಮಾನ್ಯವಾಗಿರಬೇಕಾದ, ಉಚಿತವಾದ ಯಾ ಆರೋಗ್ಯಕರವಾದ ಪ್ರಮಾಣವನ್ನು ಮೀರಿದ, ಮೈತೂಕ: her overweight has become a serious problem of health to her ಆಕೆಯ ಮೈಯ ಅತಿತೂಕ ಆಕೆಯ ಆರೋಗ್ಯಕ್ಕೊಂದು ಪ್ರಬಲ ಸಮಸ್ಯೆಯೇ ಆಗಿದೆ.
  3. ಅತಿಶಯವಾದ–ಪ್ರಾಮುಖ್ಯ, ಘನತೆ, ಶ್ರೇಷ್ಠತೆ.
2overweight ಓವರ್‍ವೇಟ್‍
ಗುಣವಾಚಕ

(ಇರಬೇಕಾದ್ದಕ್ಕಿಂತ ಯಾ ಯುಕ್ತವಾದ್ದಕ್ಕಿಂತಲೂ) ಹೆಚ್ಚು ತೂಕವಾದ; ಅತಿ–ಭಾರವಾದ, ತೂಕವಾದ: overweight luggage ಅತಿಭಾರವಾದ ಸಾಮಾನಿನ ಹೊರೆ.

3overweight ಓವರ್‍ವೇಟ್‍
ಸಕರ್ಮಕ ಕ್ರಿಯಾಪದ

ಅತಿಭಾರ ಹೇರು; ಮಿತಿಮೀರಿದ ತೂಕ ಹೇರು.