overweigh ಓವರ್‍ವೇ
ಸಕರ್ಮಕ ಕ್ರಿಯಾಪದ
  1. ತೂಕದಲ್ಲಿ ಮೀರಿಸು.
  2. (ರೂಪಕವಾಗಿ) (ಘನತೆ, ಪ್ರಾಮುಖ್ಯ, ಮೊದಲಾದವುಗಳಲ್ಲಿ) ಮೀರಿಸು: an opinion that overweighs all others ಘನತೆಯಲ್ಲಿ, ಪ್ರಾಮುಖ್ಯದಲ್ಲಿ, ಉಳಿದೆಲ್ಲವನ್ನೂ ಮೀರಿಸುವ ಅಭಿಪ್ರಾಯ.
  3. (ಅತಿಯಾದ ಭಾರದಿಂದ) ಕುಗ್ಗಿಸಿಬಿಡು.
  4. (ರೂಪಕವಾಗಿ) (ಸಹನೆಗೆ ಮೀರಿದ್ದರಿಂದ) ಉತ್ಸಾಹ, ಧೈರ್ಯಗಳನ್ನು–ಕುಗ್ಗಿಸು, ಉಡುಗಿಸು, ಕೆಡಿಸು: a misfortune that overweighs one’s spirits ವ್ಯಕ್ತಿಯ ಉತ್ಸಾಹ ಧೈರ್ಯಗಳನ್ನೆಲ್ಲ ಉಡುಗಿಸಿಬಿಡುವ ದುರದೃಷ್ಟ.