overweening ಓವರ್‍ವೀನಿಂಗ್‍
ಗುಣವಾಚಕ
  1. (ವ್ಯಕ್ತಿಯ ವಿಷಯದಲ್ಲಿ) ಅತಿಸೊಕ್ಕಿನ; ಅತಿ ಗರ್ವಿಷ್ಠ(ನಾದ); ವಿಪರೀತ ಅಹಂಕಾರಿಯಾದ: he is so overweening that he looks down on everyone ಅವನು ಎಷ್ಟು ಸೊಕ್ಕಿನವನೆಂದರೆ, ಅವನು ಎಲ್ಲರನ್ನೂ ಕೀಳಾಗಿ ಕಾಣುತ್ತಾನೆ.
  2. (ಅಭಿಪ್ರಾಯಗಳು, ಲಕ್ಷಣಗಳು, ಗುಣಗಳು, ಮೊದಲಾದವುಗಳ ವಿಷಯದಲ್ಲಿ) ಅತಿಯಾದ; ಅತಿರೇಕದ; ತೀರ ಔದ್ಧತ್ಯದ; ಹದ್ದು ಮೀರಿದ: overweening pride ಅತಿರೇಕದ ಗರ್ವ. overweening prejudice ಅತಿಯಾದ ರಾಗದ್ವೇಷ; ಮಿತಿಮೀರಿದ ಪೂರ್ವಗ್ರಹ. overweening ambition ಹದ್ದು ಮೀರಿದ ಹಿರಿಯಾಸೆ.
  3. ಅತಿ ಆತ್ಮವಿಶ್ವಾಸವಿರುವ.