overture ಓವರ್‍ಟ್ಯುಅರ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ ಪ್ರಯೋಗ) (ಸಂಧಾನ, ಸ್ನೇಹ, ಮೊದಲಾದವನ್ನು ಏರ್ಪಡಿಸುವ ಸಲುವಾಗಿ ಮಾಡುವ) ಮೊದಲ ಸೂಚನೆ; ಪ್ರಥಮ ಪ್ರಸ್ತಾಪ; ಮೊದಲ ಸಲಹೆ: overtures of peace ಶಾಂತಿಯ ಪ್ರಸ್ತಾಪಗಳು; ಶಾಂತಿಸ್ಥಾಪನೆಗಾಗಿ ಮಾಡಿದ ಸಂಧಾನದ ಮೊದಲ ಸೂಚನೆಗಳು.
  2. ವಿಧ್ಯುಕ್ತವಾದ ಪ್ರಸ್ತಾಪ : make overtures to ಪ್ರಸ್ತಾಪ ಮಾಡು; ಆರಂಭಿಸು.
  3. (ಸಂಗೀತ)
    1. ಪೀಠಿಕಾಕೃತಿ; ಪ್ರಸ್ತಾವನಾಕೃತಿ; ಗೀತನಾಟಕ, ಧಾರ್ಮಿಕ ಗೀತರೂಪಕ, ಮೊದಲಾದವುಗಳಿಗೆ ಪೀಠಿಕೆಯಾಗಿ ವಾದ್ಯಗೋಷ್ಠಿ ನುಡಿಸಲು ರಚಿಸಿದ ಮೇಳಕೃತಿ.
    2. ಮೇಳ ಪೀಠಿಕೆಯ ಶೈಲಿಯಲ್ಲಿದ್ದು, ಒಂದೇ ಸಂಗತಿಯಿಂದ ಕೂಡಿದ ಸ್ವತಂತ್ರ ಕೃತಿ.