overtop ಓವರ್‍ಟಾಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overtopped; ವರ್ತಮಾನ ಕೃದಂತ overtopping).
  1. (ಇನ್ನೊಂದಕ್ಕಿಂತ) ಮೇಲಿರು; ಎತ್ತರವಾಗಿರು; ಉನ್ನತವಾಗಿರು: Everest overtops all other peaks in the Himalayas ಎವರೆಸ್ಟ್‍ ಶಿಖರ ಹಿಮಾಲಯದ ಉಳಿದೆಲ್ಲ ಶಿಖರಗಳಿಗಿಂತ ಎತ್ತರವಾಗಿದೆ.
  2. (ಶಾಸನ, ಅಧಿಕಾರ, ಮೊದಲಾದವುಗಳ) ಎಲ್ಲೆಕಟ್ಟನ್ನು ಮೀರು; ಉಲ್ಲಂಘಿಸು; ಅತಿಕ್ರಮಿಸು: no individual shall overtop the law ಯಾವ ವ್ಯಕ್ತಿಯೇ ಆಗಲಿ ಶಾಸನದ ಎಲ್ಲೆಕಟ್ಟನ್ನು ಮೀರಲಾಗದು.
  3. (ಬೇರೆ ಎಲ್ಲವನ್ನೂ) ಮೀರಿಸು: this year’s rainfall overtops that of many previous years ಈ ವರ್ಷದ ಮಳೆ ಹಿಂದಿನ ಹಲವಾರು ವರ್ಷಗಳ ಮಳೆಯನ್ನು ಮೀರಿಸಿದೆ.