See also 2overthrow
1overthrow ಓವರ್‍ತ್ರೋ
ಸಕರ್ಮಕ ಕ್ರಿಯಾಪದ
(ಭೂತರೂಪ overthrew; ಭೂತಕೃದಂತ overthrown).
  1. (ಬಲಪ್ರಯೋಗದ ಮೂಲಕ ಅಧಿಕಾರ, ಪದವಿ, ಮೊದಲಾದವುಗಳಿಂದ) ತಳ್ಳು; ಉರುಳಿಸು: overthrow a tyrant ದಬ್ಬಾಳಿಕೆಗಾರನನ್ನು ಅಧಿಕಾರದಿಂದ ಉರುಳಿಸು.
  2. (ಸಂಸ್ಥೆ ಮೊದಲಾದವನ್ನು) ಕೊನೆಮುಟ್ಟಿಸು; ನಾಶಮಾಡು; ಮುಗಿಸಿಬಿಡು; ತಲೆಯೆತ್ತದಂತೆ ತುಳಿದುಹಾಕು.
  3. ಗೆಲ್ಲು; ಜಯಿಸು; ಸೋಲಿಸು.
  4. ಉರುಳಿಸು; ಕೆಡವಿಬಿಡು; ಉರುಳಿಸಿಬಿಡು: the storm overthrew even giant trees ಬಿರುಗಾಳಿ ಭಾರಿ ಭಾರಿ ಮರಗಳನ್ನೂ ಸಹ ಉರುಳಿಸಿಬಿಟ್ಟಿತು.
  5. (ಕ್ರಿಕೆಟ್‍) ಗುರಿಯಾಚೆಗೆ ಎಸೆ; ಅತಿ ದೂರ ಎಸೆ: by overthrowing the ball, he lost the game ಚೆಂಡನ್ನು ಅತಿ ದೂರ ಎಸೆದು ಅವನು ಆಟ ಕಳೆದುಕೊಂಡ.
  6. (ಪ್ರಾಚೀನ ಪ್ರಯೋಗ) (ಮುಖ್ಯವಾಗಿ ಶಕ್ತಿ, ಸ್ವಾಸ್ಥ್ಯವನ್ನು) ಕೆಡಿಸು; ಭಂಗಗೊಳಿಸು; ನಾಶ ಮಾಡು: what a noble mind is here overthrown ಎಂತಹ ಶ್ರೇಷ್ಠ ವ್ಯಕ್ತಿಯ ಚಿತ್ತಸ್ವಾಸ್ಥ್ಯವೇ ನಾಶವಾಗಿಬಿಟ್ಟಿದೆ.
See also 1overthrow
2overthrow ಓವರ್‍ತ್ರೋ
ನಾಮವಾಚಕ
  1. ಉರುಳಿಸುವುದು ಯಾ ಉರುಳಿಸಲ್ಪಡುವುದು.
  2. ಪತನ; ಪದಚ್ಯುತಿ; ಅಧಿಕಾರಚ್ಯುತಿ.
  3. ತಲೆಯೆತ್ತದ ಸೋಲು; ವಿನಾಶ; ಹಾನಿ.
  4. (ಕ್ರಿಕೆಟ್‍) ಓವರ್‍ತ್ರೋ:
    1. ಅತಿಎಸೆತ; ಬ್ಯಾಟುಗಾರನು ಹೊಡೆದ ಚೆಂಡನ್ನು ವಿಕೆಟ್ಟಿನ ಬಳಿ ತಡೆಯಲಾಗದಂತೆ ಎಸೆದದ್ದರಿಂದ ರನ್ನುಗಳು ಬರುವ ಎಸೆತ.
    2. ಹಾಗೆ ಅತಿ ಎಸೆತದಿಂದ ಬಂದ ರನ್ನು, ಓಟ.