overtake ಓವರ್‍ಟೇಕ್‍
ಸಕರ್ಮಕ ಕ್ರಿಯಾಪದ
(ಭೂತರೂಪ overtook; ಭೂತಕೃದಂತ overtaken).
  1. (ಪ್ರಯಾಣದಲ್ಲಿ ಯಾ ಯಾರನ್ನಾದರೂ ಬೆನ್ನಟ್ಟುವುದರಲ್ಲಿ ವೇಗವಾಗಿ ಮುಂದುವರಿಸು, ಮುಂದಿರುವ ವ್ಯಕ್ತಿ, ವಾಹನ, ಮೊದಲಾದವನ್ನು) ಹಿಡಿ; (ಮುಂದಿರುವ ವ್ಯಕ್ತಿ, ವಾಹನ ಮೊದಲಾದವುಗಳ) ಸರಿಸಮಕ್ಕೆ ಬರು: the police overtook the fugitive criminals and arrested them ಪೊಲೀಸರು ತಪ್ಪಿಸಿಕೊಂಡು ಓಡುತ್ತಿದ್ದ ಅಪರಾಧಿಗಳನ್ನು ಬೆನ್ನಟ್ಟಿ ಹಿಡಿದು ದಸ್ತಗಿರಿ ಮಾಡಿದರು.
  2. (ಬ್ರಿಟಿಷ್‍ ಪ್ರಯೋಗ) (ಮುಂದೆ ಹೋಗುತ್ತಿರುವ ಯಾ ಓಡುತ್ತಿರುವ ವ್ಯಕ್ತಿ, ವಾಹನ, ಮೊದಲಾದವನ್ನು) ವೇಗದ ಚಲನೆಯಿಂದ ದಾಟಿ ಮುಂದೆ ಹೋಗು: our car overtook the one before us and left it behind ನಮ್ಮ ಕಾರು ಮುಂದಿನದನ್ನು ದಾಟಿ ಹೋಗಿ ಅದನ್ನು ಹಿಂದೆ ಬೀಳಿಸಿತು, ಹಾಕಿತು.
  3. ಉಳಿದದ್ದನ್ನು ಪೂರೈಸಿ ಮುಂದುವರಿ; ಉಳಿದು ಹೋಗಿದ್ದ ಕೆಲಸವನ್ನೆಲ್ಲ ಮುಗಿಸಿ ಮುಂದುವರಿ: overtake the backlog of work ಬಾಕಿ ಬಿದ್ದ ಕೆಲಸದ ಹೊರೆಯನ್ನೆಲ್ಲ ಮುಗಿಸಿ ಮುಂದುವರಿ.
  4. (ಉತ್ಪಾದನೆ ಮೊದಲಾದವುಗಳಲ್ಲಿ) ಇತರರ ಮಟ್ಟಕ್ಕೆ ಬರು ಯಾ ಅವರನ್ನು ಮೀರಿಸು: try to overtake the advanced countries in steel production ಉಕ್ಕಿನ ಉತ್ಪಾದನೆಯಲ್ಲಿ ಮುಂದುವರಿದ ದೇಶಗಳ ಮಟ್ಟಕ್ಕೆ ಬರಲು ಯಾ ಅವನ್ನು ಮೀರಿಸಲು ಯತ್ನಿಸು.
  5. (ರಾತ್ರಿ, ಚಂಡಮಾರುತ, ವಿಪತ್ತು, ಮೃತ್ಯು, ಮೊದಲಾದವುಗಳ ವಿಷಯದಲ್ಲಿ) ಹಠಾತ್ತಾಗಿ ಒದಗು; ಅನಿರೀಕ್ಷಿತವಾಗಿ, ಏಕಾಏಕಿ ಸಂಭವಿಸು: death overtook him suddenly ಆತನಿಗೆ ಮೃತ್ಯು ಏಕಾಏಕಿ ಒದಗಿ ಬಂತು, ಸಂಭವಿಸಿತು.