overstuffed ಓವರ್‍ಸ್ಟಹ್ಟ್‍
ಗುಣವಾಚಕ
  1. (ಪೀಠೋಪಕರಣಗಳ ವಿಷಯದಲ್ಲಿ) ದಪ್ಪ ಮೆತ್ತೆಗಳನ್ನು ಅತಿಯಾಗಿ ತುಂಬಿದ, ಒಳಸೇರಿಸಿದ.
  2. (ಕಥೆ ಮೊದಲಾದವುಗಳ ವಿಷಯದಲ್ಲಿ) ಅನಾವಶ್ಯಕವಾದ ವಿವರಗಳನ್ನು ಅತಿಯಾಗಿ ತುಂಬಿದ, ಬೇಸರ ಹಿಡಿಸುವಂತೆ ತುಂಬಿದ: an overstuffed biography ಬೇಸರ ಹಿಡಿಸುವಷ್ಟು ವಿವರಗಳನ್ನು ತುರುಕಿದ, ಗಿಡಿದ ಜೀವನ ಚರಿತ್ರೆ.
  3. ಅತಿಯಾಗಿ ಕೊಬ್ಬಿದ ಮೈಯುಳ್ಳ; ಅತಿಬೊಜ್ಜಿನ: an overstuffed man who was a compulsive eater ಬಲಾತ್ಕಾರವಾಗಿ ತಿಂದು ತಿಂದು ಕೊಬ್ಬಿದ್ದ ಅತಿ ಬೊಜ್ಜ.