overstrung ಓವರ್‍ಸ್ಟ್ರಂಗ್‍
ಗುಣವಾಚಕ
  1. ಅತಿಬಿಗಿತದ; ವಿಪರೀತ ಬಿಗಿಸಿದ.
  2. (ಪಿಯಾನೋವಿನ ವಿಷಯದಲ್ಲಿ) ಮಂದ್ರಸ್ಥಾಯಿಯ ತಂತಿಗಳು ತಾರಸ್ಥಾಯಿಯ ತಂತಿಗಳ ಮೇಲೆ ಕೋಸೆಯಾಗಿ ಹಾಯುವಂತೆ ಅಳವಡಿಸಿದ.
  3. ಬಿಲ್ಲಿನ ಹೆದೆಯನ್ನು ಅತಿಯಾಗಿ ಬಿಗಿದ; ಅತಿಯಾಗಿ ಬಿಗಿದ ಹೆದೆಯುಳ್ಳ.
  4. (ವ್ಯಕ್ತಿಯ ವಿಷಯದಲ್ಲಿ) ಮಿತಿಮೀರಿ ಉದ್ರೇಕಗೊಂಡ; ಅತ್ಯುದ್ರಿಕ್ತ: an overstrung state of mind ಅತ್ಯುದ್ರಿಕ್ತ ಮನಃಸ್ಥಿತಿ.