overstride ಓವರ್‍ಸ್ಟ್ರೈಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ overstrode, ಭೂತಕೃದಂತ overstridden).
  1. ಇತರರನ್ನು ಮೀರಿಸು; ಇತರರಿಗಿಂತ ಮಿಗಿಲಾಗು: overstride one’s competitors ತನ್ನ ಪ್ರತಿಸ್ಪರ್ಧಿಗಳನ್ನು ಮೀರಿಸು.
  2. (ಒಂದರ) ಆಚೆ ಈಚೆ ಕಾಲು ಹಾಕಿಕೊಂಡು ನಿಲ್ಲು; ಮೇಲೆ ಯಾ ಮೇಲ್ಗಡೆ ಎರಡು ಕಡೆಯೂ ಕಾಲು ಇಳಿಯಬಿಟ್ಟುಕೊಂಡು ನಿಲ್ಲು: overstride a horse ಕುದುರೆಯ ಎರಡು ಕಡೆಯಲ್ಲಿಯೂ ಕಾಲುಗಳನ್ನು ಇಳಿಯಬಿಟ್ಟುಕೊಂಡು ಸವಾರಿ ಮಾಡು.
  3. (ಎಲ್ಲರನ್ನೂ ಯಾ ಎಲ್ಲವನ್ನೂ) ಮೆಟ್ಟಿನಿಲ್ಲು; ಮೀರಿ ನಿಲ್ಲು: he overstrides all the other members of the committee with his majestic personality ತನ್ನ ಘನವಾದ ವ್ಯಕ್ತಿತ್ವದಿಂದ ಆತ ಸಮಿತಿಯ ಸದಸ್ಯರನ್ನೆಲ್ಲ ಮೆಟ್ಟಿನಿಲ್ಲುತ್ತಾನೆ.
  4. ದಾಟಿ ಹೆಜ್ಜೆ ಇಡು; ದಾಪುಗಾಲಿನಿಂದ ದಾಟು: one can easily overstride the stream at its narrowest points ತೊರೆಯ ಅತ್ಯಂತ ಕಿರಿಯೆಡೆಗಳಲ್ಲಿ ಅದನ್ನು ಸರಾಗವಾಗಿ ದಾಪುಗಾಲಿನಿಂದ ದಾಟಿಬಿಡಬಹುದು.
  5. ಇತರರಿಗಿಂತ ಹೆಚ್ಚು ವೇಗವಾಗಿಯೋ ಮುಂದಕ್ಕೋ ಹೆಜ್ಜೆ ಹಾಕು: he overstrode his companions ತನ್ನ ಒಡನಾಡಿಗಳಿಗಿಂತ ಅವನು ಹೆಚ್ಚು ವೇಗವಾಗಿ, ಹೆಚ್ಚು ಮುಂದಕ್ಕೆ ಹೆಜ್ಜೆ ಹಾಕಿದ.