overstay ಓವರ್‍ಸ್ಟೇ
ಸಕರ್ಮಕ ಕ್ರಿಯಾಪದ
  1. (ನಿಗದಿಯಾದ ಯಾ ಉಚಿತವಾದ) ಕಾಲಕ್ಕಿಂತ ಯಾ ಕಾಲಾವಧಿಗಿಂತ ಹೆಚ್ಚಾಗಿ–ಇರು, ಉಳಿ, ತಂಗು: overstay one’s welcome ಆದರದ ಸ್ವಾಗತವನ್ನು ಮೀರಿ ಉಳಿದುಕೊ; ಆತಿಥೇಯರಿಗೆ ಬೇಸರ ಹುಟ್ಟುವಷ್ಟು ಕಾಲ ಇದ್ದು ಬಿಡು.
  2. (ಆರ್ಥಿಕ ವಿಷಯದಲ್ಲಿ) ಗರಿಷ್ಠ ಲಾಭ ಬರುವಷ್ಟಕ್ಕಿಂತ ಹೆಚ್ಚು ಕಾಲ (ಮಾರುಕಟ್ಟೆಯಲ್ಲಿ ಸರಕು) ಉಳಿದುಬಿಡು.