overspend ಓವರ್‍ಸ್ಪೆಂಡ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overspent).
ಸಕರ್ಮಕ ಕ್ರಿಯಾಪದ
  1. (ಆದಾಯಕ್ಕಿಂತ, ಶಕ್ತಿಗಿಂತ, ಗೊತ್ತಾದ ಮೊತ್ತಕ್ಕಿಂತ) ಮೀರಿ ವ್ಯಯ ಮಾಡು; ಅತಿವ್ಯಯಮಾಡು; ದುಂದುವೆಚ್ಚ ಮಾಡು: he overspent his salary by thousands ಅವನು ತನ್ನ ಸಂಬಳಕ್ಕಿಂತ ಸಾವಿರಗಟ್ಟಲೆ ಅತಿವ್ಯಯ ಮಾಡಿದ.
  2. (ಆತ್ಮಾರ್ಥಕ) ತನ್ನ ಎಲ್ಲವನ್ನೂ ಯಾ ಸರ್ವಶಕ್ತಿಯನ್ನೂ ಅತಿ ವ್ಯಯ ಮಾಡಿಕೊ.
  3. (ಪ್ರಾಚೀನ ಪ್ರಯೋಗ) ಮುಗಿಸಿಬಿಡು; ಪೂರೈಸಿಬಿಡು.
ಅಕರ್ಮಕ ಕ್ರಿಯಾಪದ

ದುಂದುವೆಚ್ಚ ಮಾಡುತ್ತಾ ಹೋಗು; ದುಂದುವ್ಯಯ ಮಾಡತೊಡಗು: she started overspending to a dangerous extent ಆಕೆ ಅಪಾಯಕರವಾಗುವಷ್ಟರ ಮಟ್ಟಿಗೆ ದುಂದುವೆಚ್ಚ ಮಾಡತೊಡಗಿದಳು.