oversimplify ಓವರ್‍ಸಿಂಪ್ಲಿಹೈ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ oversimplifies, ಭೂತರೂಪ ಮತ್ತು ಭೂತಕೃದಂತ oversimplified).

ಅತಿ ಸರಳಗೊಳಿಸು:

  1. ತಪ್ಪಾಗುವಷ್ಟು, ಅಸ್ಪಷ್ಟವಾಗುವಷ್ಟು– ಸರಳಗೊಳಿಸು.
  2. ಸಮಸ್ಯೆಯ ಜಟಿಲತೆ ಯಾ ತೀವ್ರತೆಯನ್ನು ಕಡಮೆ ಮಾಡಿ ಹೇಳು; ಗುರುತರವಾದ ಸಮಸ್ಯೆಯನ್ನು ಯಾ ವಿಷಯವನ್ನು ಅತಿ ಲಘುವಾಗಿ ಹೇಳು, ವಿವರಿಸು, ಭಾವಿಸು.