See also 2overshoot
1overshoot ಓವರ್‍ಷೂಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overshot).
  1. (ಕ್ಷಿಪಣಿ, ಗುಂಡು, ಬಾಣ, ಮೊದಲಾದವನ್ನು) ಗುರಿ–ಮೀರಿ ಹೊಡೆ, ಮೀರಿ ಹಾರಿಸು; ಗುರಿಯಾಚೆಗೆ ಹಾರಿಸು.
  2. (ನಿರ್ದಿಷ್ಟ ಸ್ಥಾನವನ್ನು ಯಾ ಗಾಡಿಯನ್ನು) ಮೀರಿ ಹೋಗು; ದಾಟಿ ಮುಂದೆ ಹೋಗು.
  3. (ವಿಮಾನದ ವಿಷಯದಲ್ಲಿ) (ಇಳಿದಾಣದಲ್ಲಿ ಇಳಿಯುವಾಗ ಯಾ ಏರುವಾಗ) ಓಟದ ಹಾದಿಯ ಆಚೆಗೆ ಹಾರು ಯಾ ಓಟದ ಹಾದಿಯಲ್ಲಿ ಬಹಳ ದೂರ ಓಡು.
ಪದಗುಚ್ಛ
  1. overshoot the mark
    1. ಗುರಿ ಮೀರಿ ಹೊಡೆ; ಗುರಿ ತಪ್ಪು.
    2. (ರೂಪಕವಾಗಿ) ಗುರಿ ಮೀರು; ಉದ್ದೇಶವನ್ನು ಯಾ ಉಚಿತವಾದುದನ್ನು ಮೀರಿ ಹೋಗು; ಅತಿ ದೂರ ಹೋಗು.
    3. (ವ್ಯಕ್ತಿ, ಸಂದರ್ಭ, ಮೊದಲಾದವನ್ನು) ತಪ್ಪಾಗಿ ಗ್ರಹಿಸಿ ತಪ್ಪು ಮಾಡು.
  2. overshoot oneself
    1. ಗುರಿ ಮೀರಿ ಹೊಡೆ; ಗುರಿಯಾಚೆಗೆ ಹೊಡೆಯುವ ಮೂಲಕ ಗುರಿ ತಪ್ಪು.
    2. ಉತ್ಪ್ರೇಕ್ಷಿಸು; ಅತಿಶಯಿಸು.
    3. (ತನ್ನ ಉದ್ದೇಶಕ್ಕೆ ಯಾ ಹಿತಕ್ಕೆ) ಧಕ್ಕೆಯಾಗುವಷ್ಟು ದೂರ ಹೋಗು, ತಪ್ಪಿಗೆ ಬೀಳು.
See also 1overshoot
2overshoot ಓವರ್‍ಷೂಟ್‍
ನಾಮವಾಚಕ

ಗುರಿ ಮೀರಿದ ಹೊಡೆತ ಯಾ ಆ ಹೊಡೆತದ ಪ್ರಮಾಣ.