oversee ಓವರ್‍ಸೀ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ oversees, ಭೂತರೂಪ oversaw, ಭೂತಕೃದಂತ overseen).
  1. (ಕೆಲಸ ಮಾಡುವುದರ ಯಾ ಕೆಲಸಗಾರರ) ಪಾರುಪತ್ಯ ನೋಡು; ಮೇಲ್ವಿಚಾರಣೆ ನೋಡಿಕೊ, ನಡೆಸು.
  2. (ಪ್ರಾಚೀನ ಪ್ರಯೋಗ) (ಮೇಲ್ಗಡೆಯಿಂದ, ಮೇಲ್ಮಟ್ಟದಿಂದ) ನೋಡು; ವೀಕ್ಷಿಸು.
  3. (ಪ್ರಾಚೀನ ಪ್ರಯೋಗ) (ದಾಖಲೆಗಳು ಮೊದಲಾದವನ್ನು) ಪರಿಶೀಲಿಸು.