See also 2overrun
1overrun ಓವರನ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ overrunning; ಭೂತರೂಪ overran; ಭೂತಕೃದಂತ ಅದೇ).
  1. (ನೆಲವನ್ನು) ಪ್ರವಾಹದಲ್ಲಿ ಮುಳುಗಿಸು; (ನೆಲದ ಮೇಲೆ) ಪ್ರವಾಹ ಹರಿಸು.
  2. (ಒಂದು ದೇಶ, ಪ್ರದೇಶ, ಮೊದಲಾದವುಗಳ ಮೇಲೆ) ಅಪ್ಪಣೆಯಿಲ್ಲದೆ ಹಾದು ಹೋಗು.
  3. (ಒಂದು ದೇಶದ ಮೇಲೆ) ದಂಡು ನುಗ್ಗಿಸು; ದಾಳಿ ಮಾಡು.
  4. (ಒಂದು ದೇಶವನ್ನು) ಸದೆಬಡಿ; ಧ್ವಂಸ ಮಾಡು.
  5. (ಹುಳುಗಳು, ಕ್ರಿಮಿಕೀಟಗಳು, ಕಳೆಗಳು, ಕಾಡು ಗಿಡಗಳು, ಮೊದಲಾದವುಗಳ ವಿಷಯದಲ್ಲಿ) ಒಂದರ ಮೇಲೆ ಅತಿಯಾಗಿ–ಹರಡು, ಹಬ್ಬು.
  6. (ರೂಪಕವಾಗಿ) (ಭಾವನೆ, ನಂಬಿಕೆ, ಮೊದಲಾದವುಗಳ ವಿಷಯದಲ್ಲಿ) ಅತಿಯಾಗಿ ಹಬ್ಬಿಕೊ; ವಿಪರೀತ ಪ್ರಚಾರಗೊಳ್ಳು.
  7. (ಮುದ್ರಣ)
    1. ಸಾಲನ್ನು ಮತ್ತೆ ಜೋಡಿಸು; ಪಂಕ್ತಿಯಲ್ಲಿ ಅಕ್ಷರಗಳನ್ನು ಸೇರಿಸಿದ್ದರಿಂದ ಯಾ ತೆಗೆದುಹಾಕಿದ್ದರಿಂದ ಉಂಟಾದ ಜೋಡಣೆಯಂತೆ ಪಂಕ್ತಿಯನ್ನು ಕೂಡಿಸಿಕೊ, ಪುನರ್‍ ವ್ಯವಸ್ಥೆ ಮಾಡು.
    2. (ಪುಸ್ತಕ, ಕೈಪಿಡಿ, ಹಸ್ತಪತ್ರಿಕೆ, ಮೊದಲಾದವನ್ನು) ಅಧಿಕ ಪ್ರತಿ, ಹೆಚ್ಚು ಪ್ರತಿ ಮುದ್ರಿಸು; ಅಪ್ಪಣೆ ಮಾಡಿದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ, ಸಂಖ್ಯೆಯಲ್ಲಿ ಮುದ್ರಿಸು.
    3. (ಪದ ಮೊದಲಾದವನ್ನು) ಮುಂದಿನ ಸಾಲು ಯಾ ಮುಂದಿನ ಪುಟದಲ್ಲಿ ಮುಂದುವರಿಸು.
  8. ಮಿತಿಯನ್ನೋ ಗಡುಕಾಲವನ್ನೋ–ಮೀರು.
  9. (ಯಂತ್ರಶಾಸ್ತ್ರ) (ಇನ್ನೊಂದಕ್ಕಿಂತ) ವೇಗವಾಗಿ ಸುತ್ತು, ತಿರುಗು.
See also 1overrun
2overrun ಓವರನ್‍
ನಾಮವಾಚಕ
  1. ಅಧಿವ್ಯಾಪನೆ; ಒಂದರ ಮೇಲೆ ಹರಡಿರುವುದು, ಹಬ್ಬಿರುವುದು ಯಾ ಅದರ ಪ್ರಮಾಣ.
  2. (ಮುದ್ರಣ) ಮುಂದುವರಿಕೆ; ಮುಂದಿನ ಸಾಲಿನಲ್ಲಿ ಯಾ ಪುಟದಲ್ಲಿ ಮುಂದುವರೆದಿರುವುದು ಯಾ ಅದರ ಪ್ರಮಾಣ; ಮುಂದುವರಿಕೆ ಯಾ ಅದರ ಪ್ರಮಾಣ.
  3. ಅಧಿಕ ವೇಗ; ಹೆಚ್ಚು ವೇಗದ ಚಲನೆ; ಎಂಜಿನ್ನು ಒದಗಿಸಿರುವುದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ವಾಹನ ಚಲಿಸುವುದು.