See also 2override
1override ಓವರೈಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ overrode, ಭೂತಕೃದಂತ overridden).
  1. (ಕುದುರೆಯನ್ನು) ಅತಿಯಾಗಿ ಸವಾರಿ ಮಾಡಿ ಬಳಲಿಸು.
  2. (ಸಜ್ಜಿತ ಸೈನ್ಯದಿಂದ) ಶತ್ರುದೇಶದ ಮೇಲ್ವಾಯ್ದು ಹೋಗು; ಶತ್ರುದೇಶದ ಮೇಲೆ ದಾಳಿ ಮಾಡು.
  3. (ವ್ಯಕ್ತಿಯನ್ನು) ಕುದುರೆಯ ಕಾಲಿನಡಿಯಲ್ಲಿ ತುಳಿಸು.
  4. (ರೂಪಕವಾಗಿ) ತುಳಿದು ಹಾಕು; (ಇತರರ ಸಲಹೆಯನ್ನು ಯಾ ಅಭಿಪ್ರಾಯವನ್ನು ಬದಿಗೊತ್ತಿ) ತನ್ನ ಸಂಕಲ್ಪವನ್ನು ಯಾ ಅಧಿಕಾರವನ್ನು (ಅವರ ಮೇಲೆ) ಹೇರು: override one’s advisers (ಸಮಾಲೋಚಕರ ಸಲಹೆಯನ್ನು ತಳ್ಳಿ ಹಾಕಿ) ಸ್ವೇಚ್ಛೆಯನ್ನೇ ನಡೆಸು.
  5. ಬೇರೊಬ್ಬ ಅಧಿಕಾರಿಯ ತೀರ್ಮಾನವನ್ನು ರದ್ದುಪಡಿಸು: override all previous decisions ಹಿಂದಿನ ತೀರ್ಮಾನಗಳನ್ನೆಲ್ಲ ರದ್ದುಪಡಿಸು.
  6. (ಶಸ್ತ್ರವೈದ್ಯ) ಅಧಿಕ್ರಮಿಸು; (ಸಾಮಾನ್ಯವಾಗಿ ಮುರಿದ ಮೂಳೆಯ ಒಂದು ತುಂಡಿನ ವಿಷಯದಲ್ಲಿ) ಇನ್ನೊಂದರ ಮೇಲೆ ಕೂರು, ಸರಿ, ಚಾಚು.
See also 1override
2override ಓವರೈಡ್‍
ನಾಮವಾಚಕ
  1. ಸ್ವಯಂಚಾಲನೆಯ ಸ್ಥಗನ, ಸ್ತಂಭನ; ಸ್ವಯಂಚಾಲನೆಯನ್ನು ನಿಲ್ಲಿಸುವಿಕೆ ಯಾ ನಿಲ್ಲಿಸುವ ಪ್ರಕ್ರಿಯೆ.
  2. ಹೀಗೆ ಸ್ವಯಂಚಾಲನೆಯನ್ನು ನಿಲ್ಲಿಸಲು ಬಳಸುವ ಸಾಧನ.