overreach ಓವರೀಚ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನನ್ನು ಚಾತುರ್ಯದಿಂದ ಯಾ ಮೋಸದಿಂದ) ಸೋಲಿಸು; ವಶಮಾಡಿಕೊ; ಸಿಕ್ಕಿಸಿಕೊ; ಹಳ್ಳಕ್ಕೆ ಕೆಡವು: to overreach one’s rival by superior guile ಪ್ರತಿಸ್ಪರ್ಧಿಯನ್ನು ಅವನ ತಂತ್ರಕ್ಕಿಂತ ಹೆಚ್ಚಿನ ತಂತ್ರದಿಂದ ಸಿಕ್ಕಿಸಿಕೊ.
  2. ಎಟುಕಿಗಿಂತ ಮೀರಿ ಚಾಚು; ಗುರಿಗಿಂತ ಮೀರಿ ಮುಂದೆ ಹೋಗು.
  3. ಅತಿಯಾಗಿ ಕೈ, ತೋಳು–ಚಾಚು.
  4. (ಆತ್ಮಾರ್ಥಕ) ಅತಿ ಆತುರದಿಂದ, ಅತಿ ಜಾಣತನದಿಂದ ಯಾ ತಂತ್ರದಿಂದ–ಸ್ವಹಿತವನ್ನೇ ಕೆಡಿಸಿಕೊ: overreach oneself
    1. ಸ್ವಹಿತವನ್ನೇ, ತನ್ನ ಉದ್ದೇಶವನ್ನೇ (ಅತಿ ಜಾಣತನ ಯಾ ಆತುರದಿಂದ) ಕೆಡಿಸಿಕೊ.
    2. ಶಕ್ತಿ ಮೀರಿ ಶ್ರಮಿಸಿ–ದಣಿ, ಆಯಾಸ ಹೊಂದು.
  5. (ಕುದುರೆಯ ವಿಷಯದಲ್ಲಿ) ಹಿಂಗಾಲಿನ ಗೊರಸಿನಿಂದ ಮುಂಗಾಲನ್ನು ತಾಕಿಸಿಕೊಂಡು ಗಾಯ ಮಾಡಿಕೊ.