See also 2overprint
1overprint ಓವರ್‍ಪ್ರಿಂಟ್‍
ಸಕರ್ಮಕ ಕ್ರಿಯಾಪದ
  1. (ಛಾಯಾಚಿತ್ರಣ) ಎರಡು ಬಾರಿ ಬೆಳಕಿಗೊಡ್ಡಿ ಚಿತ್ರವನ್ನು ಮಂಕಾಗಿಸು; (ವಿಲೋಮಪ್ರತಿಯ ಮೂಲಕ) ವಿಪರೀತ ಬೆಳಕನ್ನು ಹರಿಸಿ ಯಥಾವತ್ತಾದ ಪ್ರತಿಯ ಚಿತ್ರವನ್ನು ಮಂದಗೊಳಿಸು.
  2. (ಮುದ್ರಣ) ಎರಡುಬಾರಿ ಅಚ್ಚುಹಾಕು; ಅಚ್ಚು ಮಾಡಿದ ಹಾಳೆಯ ಮೇಲೆ ಹೆಚ್ಚಿನ ವಿಷಯವನ್ನು ಯಾ (ಮುಖ್ಯವಾಗಿ ಅಂಚೆಚೀಟಿಯಲ್ಲಿ) ಬೇರೊಂದು ಬಣ್ಣವನ್ನು ಅಚ್ಚುಮಾಡು.
  3. (ಇನ್ನೂ) ಅಧಿಕ, ಹೆಚ್ಚಿನ–ಪ್ರತಿಗಳನ್ನು ಮುದ್ರಿಸು.
  4. (ಇನ್ನಷ್ಟು) ಹೆಚ್ಚಿನ, ಅಧಿಕ–ವಿಷಯಗಳನ್ನು ಮುದ್ರಿಸು.
See also 1overprint
2overprint ಓವರ್‍ಪ್ರಿಂಟ್‍
ನಾಮವಾಚಕ
  1. (ಮುದ್ರಣ) ಅತಿ ಮುದ್ರಣ; ಅಪೇಕ್ಷಿತ ಪ್ರಮಾಣಕ್ಕಿಂತ ಮೀರಿದ ಮುದ್ರಣವಾದ ಪದಗಳು ಮೊದಲಾದವು.
  2. ಅಧಿಮುದ್ರಿತ ಪದಗಳು ಮೊದಲಾದವು; ಈಗಾಗಲೇ ಮುದ್ರಣವಾಗಿರುವುದರ ಮೇಲೆ ಮುದ್ರಿಸಿದ ಹೆಚ್ಚಿನ ವಿಷಯ ಮೊದಲಾದವು.
  3. ಅಧಿಮುದ್ರಿತ ಅಂಚೆಚೀಟಿ.