overplay ಓವರ್‍ಪ್ಲೇ
ಸಕರ್ಮಕ ಕ್ರಿಯಾಪದ
  1. (ನಾಟಕ ಮೊದಲಾದವುಗಳಲ್ಲಿ ಪಾತ್ರವನ್ನು) ಅತಿರೇಕದಿಂದ ಅಭಿನಯಿಸು.
  2. (ಭಾವಗಳನ್ನು) ಉತ್ಪ್ರೇಕ್ಷಿಸಿ ಪ್ರದರ್ಶಿಸು.
  3. ಅತಿಪ್ರಾಶಸ್ತ್ಯ, ಮಿತಿಮೀರಿದ ಪ್ರಾಮುಖ್ಯ–ನೀಡು; ಸಲ್ಲದ ಪ್ರಾಮುಖ್ಯ ನೀಡು.
  4. (ಇಸ್ಪೀಟು ಮೊದಲಾದವುಗಳಲ್ಲಿ)
    1. ಅತಿಜಾಣತನದಿಂದ ಆಡು.
    2. ಹೀಗೆ ಆಡಿ ಆಟ ಕಳೆದುಕೊ, ಸೋಲು.
ಪದಗುಚ್ಛ

overplay one’s hand

  1. (ಇಸ್ಪೀಟಿನಲ್ಲಿ ಯಾ ರೂಪಕವಾಗಿ) ತನ್ನ ಶಕ್ತಿ ಸಾಮರ್ಥ್ಯಗಳಲ್ಲಿ ಮಿತಿಮೀರಿದ ಆಶಾವಾದಿಯಾಗಿರು.
  2. ಅದರ ಮಹತ್ವವನ್ನು ಉತ್ಪ್ರೇಕ್ಷಿಸಿ (ಒಳ್ಳೆಯ ಸಂದರ್ಭ, ವಿಷಯ, ಮೊದಲಾದವನ್ನು) ಹಾಳುಮಾಡು, ಕೆಡಿಸು.