See also 2overnight
1overnight ಓವರ್‍ನೈಟ್‍
ಕ್ರಿಯಾವಿಶೇಷಣ
  1. ರಾತ್ರಿ; ಒಂದು ರಾತ್ರಿಯ ಅವಧಿಗೆ; ರಾತ್ರಿ ಹೊತ್ತು: to stay overnight ರಾತ್ರಿ ತಂಗಲು.
  2. ಕಳೆದ, ಹಿಂದಿನ ರಾತ್ರಿಯಲ್ಲಿ: preparations were made overnight ಸಿದ್ಧತೆಗಳನ್ನು ಹಿಂದಿನ ರಾತ್ರಿ ಮಾಡಲಾಯಿತು.
  3. ಒಂದೇ ರಾತ್ರಿಯಲ್ಲಿ; ಹಠಾತ್ತಾಗಿ; ಇದ್ದಕ್ಕಿದ್ದಂತೆ; ಅತಿ ಬೇಗ: new extensions sprang up overnight ಹೊಸ ಬಡಾವಣೆಗಳು ರಾತ್ರೋರಾತ್ರಿ (ಒಂದೇ ರಾತ್ರಿಯಲ್ಲಿ ಎಂಬಂತೆ) ಇದ್ದಕ್ಕಿದ್ದಂತೆ ಹುಟ್ಟಿಕೊಂಡವು.
See also 1overnight
2overnight ಓವರ್‍ನೈಟ್‍
ಗುಣವಾಚಕ
  1. ಹಿಂದಿನ ರಾತ್ರಿ ನಡೆದ ಯಾ ಮಾಡಿದ: an overnight stop ಹಿಂದಿನ ರಾತ್ರಿಯ ವಸತಿ, ಬಿಡದಿ, ಬಿಡಾರ, ತಂಗು.
  2. ಒಂದು ರಾತ್ರಿ ತಂಗುವ, ಇರುವ: a group of overnight guests sought lodgings ಒಂದು ರಾತ್ರಿ ತಂಗುವ ಅತಿಥಿಸಮುದಾಯವೊಂದು ಇರಲು ವಸತಿಯನ್ನು ಬಯಸಿತು.
  3. ಒಂದೇ ರಾತ್ರಿಯ; ಒಂದೇ ರಾತ್ರಿಗೆ ಮಾತ್ರ ಉಪಯುಕ್ತವಾಗುವ, ಬರುವ: an overnight pass ಏಕರಾತ್ರಿಯ ರಹದಾರಿ; ಒಂದೇ ರಾತ್ರಿಗೆ ಬರುವ, ಉಪಯೋಗವಾಗುವ ರಹದಾರಿ. an overnight bag ರಾತ್ರಿ (ಬಳಸುವ) ಚೀಲ.
  4. (ಒಂದೇ ರಾತ್ರಿಯಲ್ಲಿ ಆದಂತೆ ಯಾ ಮಾಡಿದಂತೆ) ಬಹಳ ಬೇಗ ಆದ ಯಾ ಮಾಡಿದ.