See also 2overlook
1overlook ಓವರ್‍ಲುಕ್‍
ಸಕರ್ಮಕ ಕ್ರಿಯಾಪದ
  1. ಮೇಲಿನಿಂದ (ಸುತ್ತಲೂ) ದೃಷ್ಟಿ ಹರಿಸು, ಕಣ್ಣುಹಾಯಿಸು; ಮೇಲಿದ್ದುಕೊಂಡು (ಸುತ್ತಲೂ) ನೋಡು: overlook the landscape around ಮೇಲಿನಿಂದ ಸುತ್ತಲಿನ ಭೂದೃಶ್ಯವನ್ನು ನೋಡು.
  2. (ಸುತ್ತಲಿನ ವಸ್ತುಗಳಿಗಿಂತ) ಮೇಲ್ಮಟ್ಟದಲ್ಲಿರು; ಎತ್ತರವಾಗಿ ಯಾ ಎತ್ತರದಲ್ಲಿ ಇರು; ಮೇಲೇರಿ ನಿಂತಿರು: the church overlooks the whole village ಚರ್ಚು ಇಡೀ ಹಳ್ಳಿಗಿಂತ ಮೇಲ್ಮಟ್ಟದಲ್ಲಿದೆ.
  3. ಮೇಲಿಂದ ಕೆಳಗಿನವರೆಗೂ ನೋಡು; ಮೇಲ್ಮಟ್ಟದವನಂತೆ (ಒಬ್ಬನನ್ನು) ತಲೆಯಿಂದ ಕಾಲಿನವರೆಗೂ, ಮುಡಿಯಿಂದ ಅಡಿಯವರೆಗೂ, ಆಪಾದಮಸ್ತಕವಾಗಿ ನೋಡು: the officer overlooked the petitioner ಅಧಿಕಾರಿ ಅರ್ಜಿದಾರನನ್ನು ಮೇಲಿಂದ ಕೆಳಗಿನವರೆಗೂ, ಆಪಾದಮಸ್ತಕವಾಗಿ ನೋಡಿದ.
  4. ಗಮನಿಸದಿರು; ಲಕ್ಷಿಸದಿರು; ನಿರ್ಲಕ್ಷಿಸು; ಉಪೇಕ್ಷಿಸು; ಅಸಡ್ಡೆ ಮಾಡು: overlook the responsibility ಹೊಣೆಗಾರಿಕೆಯನ್ನು ಉಪೇಕ್ಷಿಸು, ಅಸಡ್ಡೆಮಾಡು.
  5. (ಅಪರಾಧ ಮೊದಲಾದವನ್ನು) ಗಮನಕ್ಕೆ ತೆಗೆದುಕೊಳ್ಳದಿರು; ಎಣಿಸದಿರು; ಪರಿಗಣಿಸದಿರು; ಲಕ್ಷಿಸದಿರು; ಮನ್ನಿಸು.
  6. ಪರಿಶೀಲಿಸು; ಪರೀಕ್ಷಿಸು: overlook the accounts ಲೆಕ್ಕಾಚಾರವನ್ನು ಪರಿಶೀಲಿಸು.
  7. ಮೇಲ್ವಿಚಾರಣೆ ನೋಡಿಕೊ; ಉಸ್ತುವಾರಿ ಮಾಡು: overlook the stores ಸರಕಿನ ಮಳಿಗೆಯನ್ನು, ಕೋಠಿಯನ್ನು ಉಸ್ತುವಾರಿ ಮಾಡು.
  8. (ಪ್ರಾಚೀನ ಪ್ರಯೋಗ) ಕೆಟ್ಟಕಣ್ಣು ಹಾಕು; ಕೆಟ್ಟದೃಷ್ಟಿ ಹಾಕು; (ಮಂತ್ರಶಕ್ತಿಯಿಂದ) ದೃಷ್ಟಿ ನೆಟ್ಟು (ಒಬ್ಬನನ್ನು) ಮರುಳುಗೊಳಿಸು ಯಾ (ಒಬ್ಬನಿಗೆ) ಮಂಕುಬೂದಿ ಎರಚು: the enchanter overlooked the prince and bewitched him ಮಾಂತ್ರಿಕನು ರಾಜಕುಮಾರನ ಮೇಲೆ ಮಾಂತ್ರಿಕ ದೃಷ್ಟಿ ಹಾಕಿ ಅವನನ್ನು ಮಂಕುಗೊಳಿಸಿದ.
See also 1overlook
2overlook ಓವರ್‍ಲುಕ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಆಯಕಟ್ಟಿನ ಜಾಗ ಯಾ ದೃಷ್ಟಿ.