overleap ಓವರ್‍ಲೀಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overleaped ಯಾ overleapt).
  1. (ಒಂದನ್ನು) ದಾಟಿಕೊಂಡು ಹಾರು; ಲಂಘಿಸು; (ಒಂದರ) ಆಚೆ ಹಾರು: overleap the sea ಸಮುದ್ರವನ್ನು ಲಂಘಿಸು.
  2. ಅತಿ ದೂರ ಹಾರಿ ತನಗೆ ತಾನೇ ಹಾನಿ ಮಾಡಿಕೊ: overleap oneself ಶಕ್ತಿಮೀರಿ ಹಾರಿ ತನಗೇ ಹಾನಿ ಮಾಡಿಕೊ.
  3. (ನಡುವಿನದನ್ನು) ಬಿಟ್ಟು, ಪರಿಗಣಿಸದೆ–ಮುಂದೆ ಹಾರಿಬಿಡು: overleap the intervening chapters ನಡುವಣ ಅಧ್ಯಾಯಗಳನ್ನು ಬಿಟ್ಟು ಮುಂದೆ ಹಾರು.
  4. (ಪ್ರಾಚೀನ ಪ್ರಯೋಗ) (ಬೇರೊಬ್ಬನಿಗಿಂತ) ಮುಂದೆ, ಆಚೆಗೆ, ದೂರಕ್ಕೆ–ಹಾರು: overleap one’s rival ತನ್ನ ಪ್ರತಿಸ್ಪರ್ಧಿಗಿಂತ ಆಚೆಗೆ ಹಾರು.