overgrow ಓವರ್‍ಗ್ರೋ
ಸಕರ್ಮಕ ಕ್ರಿಯಾಪದ
(ಭೂತರೂಪ overgrew, ಭೂತಕೃದಂತ overgrown).
  1. (ಒಂದರ) ಮೇಲೆ ಬೆಳೆದುಕೊ; ಅತಿಯಾಗಿ ಬೆಳೆದು ಹಬ್ಬು: the creeper overgrows the old temple ಆ ಹಳೆಯ ದೇವಸ್ಥಾನದ ಮೇಲೆ ಬಳ್ಳಿ ಅತಿಯಾಗಿ ಬೆಳೆದು ಹಬ್ಬಿಕೊಂಡಿದೆ.
  2. (ತನ್ನ ಶಕ್ತಿ ಮೊದಲಾದವುಗಳಿಗಿಂತ) ಅತಿಯಾಗಿ ಬೆಳೆ; ಮಿತಿಮೀರಿ ಬೆಳೆ.
  3. ಅಡಚುವಂತೆ ಯಾ ನಾಶ ಮಾಡುವಂತೆ–ಅಡರು, ಹಬ್ಬಿ ಬೆಳೆ.