overgeneralize ಓವರ್‍ಜೆನರಲೈಸ್‍
ಸಕರ್ಮಕ ಕ್ರಿಯಾಪದ

ಅತಿ ಸಾಮಾನ್ಯೀಕರಿಸು: (ಸಾಕಷ್ಟಿಲ್ಲದ ಆಧಾರ, ಸಂದರ್ಭ, ಮೊದಲಾದವುಗಳಿಂದ) ಸರ್ವಸಾಮಾನ್ಯ ನಿಯಮ, ಸೂತ್ರ, ತೀರ್ಮಾನಗಳನ್ನು ರಚಿಸು; ಅಧಿಕ ವ್ಯಾಪ್ತಿಯ ಸಾಮಾನ್ಯ ಸೂತ್ರ ರಚಿಸು.

ಅಕರ್ಮಕ ಕ್ರಿಯಾಪದ

ಅತಿ ಸಾಮಾನ್ಯೀಕರಿಸು:

  1. ತಕ್ಕಷ್ಟಿಲ್ಲದ ದತ್ತಾಂಶ ಮೊದಲಾದವುಗಳಿಂದ ಸರ್ವಸಾಮಾನ್ಯ ತೀರ್ಮಾನಗಳಿಗೆ ಬರು.
  2. (ಲಭ್ಯ ಪುರಾವೆ, ಪರಿಸ್ಥಿತಿಗಳು, ಮೊದಲಾದವುಗಳಿಂದ) ಸಮರ್ಥಿಸಿಕೊಳ್ಳಬಹುದಾದ್ದಕ್ಕಿಂತ ಹೆಚ್ಚು ವಾದ ಮಾಡು ( ಸಕರ್ಮಕ ಕ್ರಿಯಾಪದ ಸಹ).