overfall ಓವರ್‍ಹಾಲ್‍
ನಾಮವಾಚಕ
  1. (ಸಮುದ್ರ ತಳದ ದಿಬ್ಬಸಾಲಿನ ಮೇಲೆ ಒಳಪ್ರವಾಹದ ಯಾ ಅಲೆಯ ರಭಸದ ಹರಿವಿನಿಂದ ಯಾ ಒಳ ಪ್ರವಾಹಗಳ ಸಂಗಮದಿಂದ ಸಮುದ್ರದ ಮೇಲುಂಟಾಗುವ) ಅಲ್ಲೋಲಕಲ್ಲೋಲ ಪ್ರದೇಶ.
  2. ಸಮುದ್ರ ಇಲ್ಲವೇ ಬೇರೆ ಜಲರಾಶಿಯ ತಳದಲ್ಲಿ ಥಟ್ಟನೆ ಕಂಡುಬಂದ ಪ್ರಪಾತ, ಆಳದ ಹೆಚ್ಚಳ.
  3. ತೂಬು; ಹೊರಗಂಡಿ; ಅಣೆಕಟ್ಟು, ಒಡ್ಡು, ಮೊದಲಾದವುಗಳಲ್ಲಿ ಹೆಚ್ಚು ನೀರು ಹರಿದು ಹೋಗಲು ಅವಕಾಶ ಕಲ್ಪಿಸಿರುವ ಸ್ಥಳ.