overdue ಓವರ್‍ಡ್ಯೂ
ಗುಣವಾಚಕ
  1. ತಡವಾದ; ವಿಳಂಬವಾದ; (ನಿರೀಕ್ಷಿತ) ಕಾಲ ಮೀರಿದ: an overdue train ತಡವಾದ ರೈಲು.
  2. (ಸಲ್ಲಿಕೆಯ) ಅವಧಿ ಮೀರಿದ; ತಡವಾದ: an overdue bill (ಪಾವತಿಯಾಗದೆ) ತಡವಾದ ಬಿಲ್ಲು.
  3. ಬಹುಕಾಲದಿಂದಲೂ ಕಾಯುತ್ತಿರುವ: improvements have been overdue ಸುಧಾರಣೆಗಳು ಕಾಲಾಂತರದಿಂದ, ಬಹುಕಾಲದಿಂದ ಕಾದಿವೆ.
  4. ಕಾಲ ಪಕ್ವವಾದ; ಕಾಲ ಹದಗೊಂಡ: that country is overdue for revolution ಆ ದೇಶದಲ್ಲಿ ಕ್ರಾಂತಿಗಾಗಿ ಕಾಲ ಹದಗೊಂಡಿದೆ, ಪಕ್ವವಾಗಿದೆ.
  5. (ಗ್ರಂಥಾಲಯದ ಪುಸ್ತಕ ಮೊದಲಾದವುಗಳ ವಿಷಯದಲ್ಲಿ) ತಡವಾದ; ಅನುಮತಿ ನೀಡಿರುವ ಅವಧಿಯನ್ನು ಮೀರಿ ಉಳಿಸಿಕೊಂಡಿರುವ.