overdraw ಓವರ್‍ಡ್ರಾ
ಸಕರ್ಮಕ ಕ್ರಿಯಾಪದ
(ಭೂತರೂಪ overdrew; ಭೂತಕೃದಂತ overdrawn).
  1. (ಬ್ಯಾಂಕಿನಲ್ಲಿ ತನ್ನ ಖಾತೆಯಲ್ಲಿರುವುದಕ್ಕಿಂತ ಯಾ ತನಗೆ ಕೊಡಲೇ ಬೇಕಾದುದಕ್ಕಿಂತ) ಹೆಚ್ಚಿನ ಹಣ ತೆಗೆ ಯಾ ಆ ಹಣಕ್ಕೆ ಚೆಕ್ಕು ಬರೆ, ಸಲ್ಲಿಸು.
  2. ಅತಿ ವರ್ಣಿಸು; ಉತ್ಪ್ರೇಕ್ಷಿಸಿ ವರ್ಣಿಸು; ಮಿತಿಮೀರಿ ವರ್ಣಿಸು: she overdrew the scene ಆಕೆ ಆ ದೃಶ್ಯವನ್ನು ಅತಿಯಾಗಿ ವರ್ಣಿಸಿದಳು.
  3. ಮಿತಿಮೀರಿ ಎಳೆ; ಅತಿ ಎಳೆದು ಹದಗೆಡಿಸು: overdraw the string of the bow ಬಿಲ್ಲಿನ ಹೆದೆಯನ್ನು ಅತಿಯಾಗಿ ಎಳೆ.
ಅಕರ್ಮಕ ಕ್ರಿಯಾಪದ

(ಬ್ಯಾಂಕಿನಲ್ಲಿ ತನ್ನ ಲೆಕ್ಕದಲ್ಲಿರುವುದಕ್ಕಿಂತ ಯಾ ತನಗೆ ಬೇಕಾಗಿರುವುದಕ್ಕಿಂತ) ಹೆಚ್ಚಾಗಿ ಹಣ ತೆಗೆ.