overdo ಓವರ್‍ಡೂ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ overdoes; ಭೂತರೂಪ
  1. ಅತಿ ಮಾಡು; ಮಿತಿಮೀರಿದಷ್ಟು, ವಿಪರೀತ–ಮಾಡು: overdo the exercise ವ್ಯಾಯಾಮವನ್ನು ಅತಿಯಾಗಿ ಮಾಡು.
  2. (ಯಾವುದನ್ನೇ ಆಗಲಿ) ಮಿತಿಮೀರಿ ಮಾಡು; ಎಲ್ಲೆ ಮೀರಿ ಮಾಡು.
  3. ಅತಿ ನಟಿಸು; ಅತಿ ಅಭಿನಯ ಮಾಡು: she overdoes her part in the play ನಾಟಕದಲ್ಲಿ ತನ್ನ ಪಾತ್ರವನ್ನು ಆಕೆ ಅತಿ ಅಭಿನಯಿಸುತ್ತಾಳೆ.
  4. ಶಕ್ತಿ ಮೀರಿ ದುಡಿ; ವಿಪರೀತ ಶ್ರಮಿಸು; ಶಕ್ತಿಯನ್ನು ಅತಿಯಾಗಿ ದಣಿಸು; ಅತಿ ಪ್ರಯಾಸದಿಂದ ಶಕ್ತಿಯನ್ನೆಲ್ಲ ಉಡುಗಿಸಿಕೊ: by over-taxing his energies he has overdone himself ತನ್ನ ಶಕ್ತಿಯನ್ನೆಲ್ಲ ಅತಿಯಾಗಿ ವ್ಯಯಮಾಡಿ ಅವನು ತನ್ನನ್ನು ದಣಿಸಿಕೊಂಡಿದ್ದಾನೆ.
  5. ಅತಿ ಬೇಯಿಸು; ಅತಿ ಪಾಕ ಮಾಡು: don’t overdo the egg ಮೊಟ್ಟೆಯನ್ನು ಅತಿ ಬೇಯಿಸಬೇಡ.
ಪದಗುಚ್ಛ

overdo it (or things)

  1. ವಿಪರೀತ ದುಡಿ; ಮಿತಿ ಮೀರಿ ಶ್ರಮಿಸು.
  2. ಅತಿ ಮಾಡು.