overcompensate ಓವರ್‍ಕಾಂಪೆನ್ಸೇಟ್‍
ಸಕರ್ಮಕ ಕ್ರಿಯಾಪದ

(ಯಾವುದನ್ನೇ) ಅತಿಯಾಗಿ ಸರಿದೂಗಿಸು; ಮೀರಿ ನಷ್ಟ ತುಂಬು; ಆಗಿರುವ ನಷ್ಟಕ್ಕಿಂತಲೂ ಹೆಚ್ಚಿನ ಪರಿಹಾರ ನೀಡು.

ಅಕರ್ಮಕ ಕ್ರಿಯಾಪದ

(ಮನಶ್ಶಾಸ್ತ್ರ) ಅತಿ ಪರಿಹಾರಕ್ಕೆ ಪ್ರಯತ್ನಿಸು, ಮುಖ್ಯವಾಗಿ ನಿಜವಾಗಿರುವ ಯಾ ಆಗಿರುವಂತೆ ಕಲ್ಪಿಸಿಕೊಂಡ ಅನ್ಯಾಯ, ನ್ಯೂನತೆ, ಅನನುಕೂಲ, ಮೊದಲಾದವುಗಳಿಗೆ ಪರಿಹಾರವಾಗಿ ತದ್ವಿರುದ್ಧವಾದ ಅಧಿಕಾರ, ಶಕ್ತಿ, ಮೊದಲಾದವನ್ನು ಗಳಿಸಲು ಪ್ರಯತ್ನಿಸು, ಶ್ರಮಿಸು.