overcome ಓವರ್‍ಕಮ್‍
ಸಕರ್ಮಕ ಕ್ರಿಯಾಪದ
(ಭೂತರೂಪ overcame; ಭೂತಕೃದಂತ ಅದೇ).
  1. (ಹೋರಾಟದಲ್ಲಿ ಯಾ ಸ್ಪರ್ಧೆಯಲ್ಲಿ) ಎದುರಾಳಿಯನ್ನು ಸೋಲಿಸು; ಎದುರಾಳಿಗಿಂತ ಮೇಲುಗೈಯಾಗು: overcome the enemy ಶತ್ರುವಿಗಿಂತ ಮೇಲುಗೈಯಾಗು; ಶತ್ರುವನ್ನು ಸೋಲಿಸು.
  2. (ವಿರೋಧ, ಪ್ರತಿಭಟನೆ, ವ್ಯಾಮೋಹ, ಮೊದಲಾದವನ್ನು) ಗೆಲ್ಲು; ಜಯಿಸು: overcome one’s weaknesses ತನ್ನ ದೌರ್ಬಲ್ಯಗಳನ್ನು ಜಯಿಸು.
  3. (ಭೂತಕೃದಂತದಲ್ಲಿ)
    1. (ದೇಹವನ್ನು ಯಾ ಮನಸ್ಸನ್ನು) ಬಳಲಿಸು; ದಣಿಸಿಬಿಡು. ಸುಸ್ತು ಮಾಡಿಬಿಡು: she was overcome with grief ದುಃಖದಿಂದ ಆಕೆ ಬಳಲಿ ಹೋದಳು.
    2. ಅಸಹಾಯಕನಾಗು; ನಿಸ್ಸಹಾಯಕನಾಗು.
    3. (ಭಾವ ಮೊದಲಾದವುಗಳ) ಪ್ರಭಾವಕ್ಕೆ, ಪರಿಣಾಮಕ್ಕೆ–ಒಳಗಾಗು: overcome with liquor ಕುಡಿತಕ್ಕೆ ಬಲಿಯಾದ; ಕುಡಿದು ಅಮಲೇರಿದ.
ಅಕರ್ಮಕ ಕ್ರಿಯಾಪದ

ಗೆಲ್ಲು; ಜಯ ಗಳಿಸು.