See also 2overcharge
1overcharge ಓವರ್‍ಚಾರ್ಜ್‍
ಸಕರ್ಮಕ ಕ್ರಿಯಾಪದ
  1. (ಯಾರಿಗಾದರೂ ಯಾ ಯಾವ ಪದಾರ್ಥಕ್ಕಾದರೂ) ದುಬಾರಿಯ, ವಿಪರೀತ ಯಾ ಮಿತಿಮೀರಿದ–ಬೆಲೆಯನ್ನು ಹಾಕು: he continually overcharged us ಅವನು ನಮಗೆ ಒಂದೇ ಸಮನೆ ದುಬಾರಿ ಬೆಲೆ ಹಾಕುತ್ತಿದ್ದ.
  2. ಉತ್ಪ್ರೇಕ್ಷಿಸು; ಅತಿಶಯಿಸು; (ವರ್ಣನೆ, ಚಿತ್ರ, ಮೊದಲಾದವುಗಳಿಗೆ) ಉತ್ಪ್ರೇಕ್ಷಿಸಿದ ಯಾ ಮಿತಿಮೀರಿದ ವಿವರಗಳನ್ನು ತುಂಬು: he overcharged his writings with hyperbole ತನ್ನ ಬರಹಗಳಿಗೆ ಅವನು ಅತಿ ಉತ್ಪ್ರೇಕ್ಷೆಯನ್ನು ಹೇರುತ್ತಿದ್ದ.
  3. (ಸಿಡಿಮದ್ದು, ವಿದ್ಯುತ್ತು, ಮೊದಲಾದವನ್ನು) ಮಿತಿಮೀರಿ ತುಂಬು; ವಿಪರೀತ ಭರ್ತಿ ಮಾಡು.
  4. (ಬೆಲೆಯನ್ನು) ದುಬಾರಿಗೊಳಿಸು; ನ್ಯಾಯವಾದುದಕ್ಕಿಂತ ಹೆಚ್ಚಿಗೆ ಏರಿಸು.
See also 1overcharge
2overcharge ಓವರ್‍ಚಾರ್ಜ್‍
ನಾಮವಾಚಕ
  1. (ನ್ಯಾಯವಾದದ್ದಕ್ಕಿಂತ) ಮೀರಿದ, ದುಬಾರಿಯಾದ, ತುಟ್ಟಿಯಾದ–ಬೆಲೆ.
  2. ದುಬಾರಿ ಬೆಲೆ ಮೊದಲಾದವನ್ನು ಹಾಕುವುದು.
  3. ಅತಿಯಾದ ಹೇರು; ವಿಪರೀತ ಹೊರೆ; ಮಿತಿಮೀರಿದ ಭಾರ.