See also 2overcast  3overcast
1overcast ಓವರ್‍ಕಾಸ್ಟ್‍
ಗುಣವಾಚಕ
  1. ಮೋಡ ಮುಚ್ಚಿದ, ಕವಿದ; ಮೇಘಾವೃತ: an overcast sky ಮೋಡ ಕವಿದ ಆಕಾಶ.
  2. ಕತ್ತಲಾದ; ಕತ್ತಲು ಕವಿದ; ಅಂಧಕಾರಮಯ.
  3. (ಹೊಲಿಗೆಯ ವಿಷಯದಲ್ಲಿ) ಮಡಿಸಿ ಹೊಲಿದ.
See also 1overcast  3overcast
2overcast ಓವರ್‍ಕಾಸ್ಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ ಅದೇ).
  1. (ಆಕಾಶ ಮೊದಲಾದವನ್ನು) ಮೋಡದಿಂದ ಮುಚ್ಚು; ಮೇಘದಿಂದ ಆವರಿಸು: dark clouds overcast the sky ಕಪ್ಪು ಮೋಡಗಳು ಆಕಾಶವನ್ನು ಮುಚ್ಚಿದುವು.
  2. ಕತ್ತಲು ಕವಿಸು; ಕತ್ತಲೆಯಿಂದ ಮರೆಸು, ಮುಚ್ಚು.
  3. (ಬಿಚ್ಚಿ ಹೋಗದಂತೆ) ಅರುಗಿನ, ಅಂಚಿನ ಮೇಲೆ ಹೊಲಿಗೆ ಹಾಕು.
ಅಕರ್ಮಕ ಕ್ರಿಯಾಪದ
  1. ಮೇಘಾವೃತವಾಗು.
  2. ಕತ್ತಲು ಕತ್ತಲಾಗು; ಕತ್ತಲು ಕವಿ.
See also 1overcast  2overcast
3overcast ಓವರ್‍ಕಾಸ್ಟ್‍
ನಾಮವಾಚಕ

ಮುಗಿಲು ಕವಿದ ಮೋಡ; ಆಕಾಶವನ್ನು ಯಾ ಅದರ ಭಾಗವೊಂದನ್ನು ಕವಿದಿರುವ ಮೋಡ.