overblown ಓವರ್‍ಬ್ಲೋನ್‍
ಗುಣವಾಚಕ
  1. ಅತಿಯಾಗಿ ಉಬ್ಬಿದ: an overblown figure ಅತಿಯಾಗಿ ಉಬ್ಬಿಸಿದ, ಉಬ್ಬಿದ–ಆಕಾರ, ಗಾತ್ರ; ಬೊಜ್ಜು ಮೈ.
  2. ಅತಿಯಾಗಿ ಮಾಡಿದ: an overblown praise ಅತಿ ಹೊಗಳಿಕೆ.
  3. ಉತ್ಪ್ರೇಕ್ಷಿತ; ಅತಿಶಯಿಸಿದ; ಅತಿಯಾಗಿ ವರ್ಣಿಸಿದ; ಬೊಜ್ಜು ಭಾಷೆಯ, ಶೈಲಿಯ: overblown prose style ಉತ್ಪ್ರೇಕ್ಷಿತ ಗದ್ಯ ಶೈಲಿ; ಬೊಜ್ಜುಗದ್ಯ.
  4. (ಬಿರುಗಾಳಿ ಮೊದಲಾದವುಗಳ ವಿಷಯದಲ್ಲಿ) ಬೀಸಿಹೋದ; ಬೀಸಿ ಹೊರಟುಹೋದ, ನಿಂತುಹೋದ.
  5. (ಹೂವಿನ ವಿಷಯದಲ್ಲಿ) ಅತಿ ಅರಳಿದ; ವಿಪರೀತ ಯಾ ಮಿತಿಮೀರಿ ಬಿರಿದ: an overblown flower ಅತಿ ಅರಳಿದ ಹೂವು.
  6. (ರೂಪಕವಾಗಿ) (ಹೆಂಗಸಿನ ಸೌಂದರ್ಯದ ವಿಷಯದಲ್ಲಿ) ಉಚ್ಛ್ರಾಯ ದೆಸೆ ದಾಟಿದ; ಪ್ರಾಯ–ಮೀರಿದ, ಮುಗಿದ, ತೀರಿದ.