overblow ಓವರ್‍ಬ್ಲೋ
ಸಕರ್ಮಕ ಕ್ರಿಯಾಪದ
(ಭೂತರೂಪ overblew; ಭೂತಕೃದಂತ overblown).
  1. (ಅತಿಯಾಗಿ ಗಾಳಿ ಊದಿ) ಅತಿ ಊದಿಸು; ಬಹಳ ಉಬ್ಬಿಸು: overblow the bladder ಚೆಂಡಿನ ಚೀಲವನ್ನು ಅತಿಯಾಗಿ ಊದಿಸು.
  2. ಅತಿಯಾದ ಪ್ರಾಮುಖ್ಯವನ್ನು ಯಾ ಮಹತ್ತ್ವವನ್ನು ಕೊಡು: overblow his dignity ಅವನ ಘನತೆಗೆ ಅತಿ ಮಹತ್ತ್ವ ಕೊಡು.
  3. ಉತ್ಪ್ರೇಕ್ಷಿಸು; ಅತಿಶಯಿಸು; ಅತಿಶಯೋಕ್ತಿಯಲ್ಲಿ ಹೇಳು, ಬರೆ: overblow one’s writing and reduce its credibility ತನ್ನ ಬರಹವನ್ನು ಉತ್ಪ್ರೇಕ್ಷಿಸಿ ಅದರ ವಿಶ್ವಸನೀಯತೆಯನ್ನು ತಗ್ಗಿಸು.
  4. (ಮರಳು ಮೊದಲಾದವುಗಳಂತೆ) ಒಂದು ಪ್ರದೇಶದ ಮೇಲೆ ಬೀಸು: the sandstorm overblew the plain ಆ ಮೈದಾನದ ಮೇಲೆ ಮರಳು ಬಿರುಗಾಳಿ ಬೀಸಿತು.
  5. (ಕೊಳಲು, ಪಿಳ್ಳಂಗೋವಿ, ಮೊದಲಾದ ಗಾಳಿವಾದ್ಯಗಳನ್ನು, ಪ್ರಧಾನ ಸ್ವರಕ್ಕೆ ಬದಲು ಗೌಣಸ್ವರ ಹೊರಡುವಂತೆ) ಅತಿ ಬಲವಾಗಿ ಊದು.
  6. (ಪ್ರಾಚೀನ ಪ್ರಯೋಗ) (ಮೋಡ, ಮಂಜು, ಮೊದಲಾದವನ್ನು) ರಭಸದಿಂದ ಬೀಸಿ ಚದುರಿಸು: the winds overblew the clouds ಗಾಳಿ ಜೋರಾಗಿ ಬೀಸಿ ಮೋಡಗಳನ್ನು ಚದುರಿಸಿತು.