overbear ಓವರ್‍ಬೇರ್‍
ಸಕರ್ಮಕ ಕ್ರಿಯಾಪದ
(ಭೂತರೂಪ overbore, ಭೂತಕೃದಂತ overborne).
  1. ಹೆಚ್ಚು ಭಾರ ಯಾ ಬಲಪ್ರಯೋಗದಿಂದ (ಎದುರಾಳಿಯನ್ನು) ಉರುಳಿಸಿ ಬಿಡು, ಸೋಲಿಸಿ ಬಿಡು: with his superior strength he easily overbore his opponent in the fight ತನ್ನ ಹೆಚ್ಚು ಬಲದಿಂದ ಅವನು ತನ್ನ ಎದುರಾಳಿಯನ್ನು ಕಾಳಗದಲ್ಲಿ ಸರಾಗವಾಗಿ ಉರುಳಿಸಿಬಿಟ್ಟ.
  2. ಬಲಾತ್ಕಾರದಿಂದ ಯಾ ಅಧಿಕಾರಬಲದಿಂದ–ಅದುಮು, ಮೆಟ್ಟು, ತುಳಿ.
  3. (ಬೇರೊಬ್ಬರ ಬಯಕೆಗಳು, ಆಕ್ಷೇಪಗಳು, ಮೊದಲಾದವನ್ನು) ತಳ್ಳಿಹಾಕು; ಬದಿ ಗೊತ್ತು: he overbore all objections to his plan ತನ್ನ ಯೋಜನೆಯ ಮೇಲಣ ಆಕ್ಷೇಪಗಳನ್ನೆಲ್ಲ ಅವನು ತಳ್ಳಿಹಾಕಿದ.
  4. ಅತಿ ದರ್ಪದಿಂದ ವರ್ತಿಸು: he overbears his children with threats of punishment ಶಿಕ್ಷೆಯ ಬೆದರಿಕೆಗಳನ್ನು ಹಾಕಿ ತನ್ನ ಮಕ್ಕಳೊಡನೆ ಅವನು ಅತಿ ದರ್ಪದಿಂದ ವರ್ತಿಸುತ್ತಾನೆ.
  5. (ಪ್ರಾಮುಖ್ಯ, ಪ್ರಭಾವ, ಮೊದಲಾದವುಗಳಲ್ಲಿ) ಮೀರಿಸು; ಮೇಲಾಗು.