See also 2overall  3overall
1overall ಓವರಾಲ್‍
ಗುಣವಾಚಕ
  1. (ಒಂದು) ತುದಿಯಿಂದ (ಇನ್ನೊಂದು) ತುದಿಯವರೆಗಿನ; ಆದ್ಯಂತ: overall length of the bridge ಸೇತುವೆಯ ಆದ್ಯಂತ ಉದ್ದ.
  2. ಒಟ್ಟು; ಪೂರ್ತಿ; ಸಂಪೂರ್ಣ; ಸಮಗ್ರ; ಎಲ್ಲವನ್ನೂ ಒಳಗೊಂಡ: overall cost ಒಟ್ಟು ಖರ್ಚು, ವೆಚ್ಚ.
  3. ಎಲ್ಲವನ್ನೂ ಪರಿಗಣಿಸಿದ; ಎಲ್ಲ ಅಂಶಗಳನ್ನೂ ಎಣಿಕೆಗೆ ತೆಗೆದುಕೊಂಡ.
See also 1overall  3overall
2overall ಓವರಾಲ್‍
ಕ್ರಿಯಾವಿಶೇಷಣ
  1. ಆದ್ಯಂತವಾಗಿ: ಮೊದಲಿನಿಂದ ಕೊನೆಯವರೆಗೆ; ತುದಿಯಿಂದ ತುದಿಯವರೆಗೆ: to view something overall (ಯಾವುದನ್ನೇ) ಆದ್ಯಂತವಾಗಿ ನೋಡು, ಅವಲೋಕಿಸು.
  2. ಒಟ್ಟಿನಲ್ಲಿ; ಎಲ್ಲ ಭಾಗಗಳಲ್ಲಿ; ಒಟ್ಟಾರೆ; ಒಟ್ಟಿನ ಮೇಲೆ: overall, the performance was excellent ಒಟ್ಟಿನಲ್ಲಿ ಪ್ರದರ್ಶನ ಭರ್ಜರಿಯಾಗಿತ್ತು.
See also 1overall  2overall
3overall ಓವರಾಲ್‍
ನಾಮವಾಚಕ
  1. (ಕೊಳೆ, ನೀರು, ಮೊದಲಾದವುಗಳು ತಗುಲದಂತೆ ಇಟ್ಟುಕೊಳ್ಳಲು ಬಳಸುವ) ಕೆಲಸದ–ಮೇಲುಡುಪು, ಮೇಲುಹೊದಿಕೆ.
  2. (ಬಹುವಚನದಲ್ಲಿ) (ಕೊಳಕು ಕೆಲಸ ಮಾಡುವಾಗ, ಕೆಲಸಗಾರರು, ಮಕ್ಕಳು, ಮೊದಲಾದವರು ಉಡುಪಿನ ಮೇಲೆ ಹಾಕಿಕೊಳ್ಳುವ) ಮೇಲುಡುಪು.
  3. (ನೀರು ಹೊಗದ, ಉದ್ದವಾದ) ಕಾಲುಹೊದಿಕೆ.
  4. (ಬ್ರಿಟಿಷ್‍ ಪ್ರಯೋಗ) (ಸೈನಿಕ ಸಮವಸ್ತ್ರದ ಭಾಗವಾಗಿ ತೊಡುವ) ಗುತ್ತನಾದ, ಬಿಗಿಯಾದ ಷರಾಯಿ.